ಕರ್ನಾಟಕ

karnataka

ETV Bharat / state

ಮತ್ತಷ್ಟು ಕುತೂಹಲ ಕೆರಳಿಸಿದ ಮೂರುಸಾವಿರಮಠದ ಗೌಪ್ಯ ಸಭೆ - ಮೂರುಸಾವಿರ ಮಠದಲ್ಲಿ ಗೌಪ್ಯ ಸಭೆ

ಕೆಎಲ್ಇ ಸಂಸ್ಥೆಗೆ ಕೋಟ್ಯಂತರ ರೂ.ಗಳ ಜಮೀನು ದಾನ ಮಾಡಿರುವ ಮೂರುಸಾವಿರ ಮಠದ ಸ್ವಾಮೀಜಿಗಳು, ದಿಂಗಾಲೇಶ್ವರ ಸ್ವಾಮೀಜಿ ಹೋರಾಟಕ್ಕೆ ಬೆಚ್ಚಿ ಬಿದ್ದಿದ್ದಾರೆ. ಮೂರುಸಾವಿರ ಮಠ ಬಿಟ್ಟು ಹಾನಗಲ್ ಮಠಕ್ಕೆ ಹೋಗಲು ತೀರ್ಮಾನಿಸಿದ್ದಾರೆಯೇ ಎಂಬುವಂತ ಸಾಕಷ್ಟು ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ..

Confidential Meeting at the Murusavir matha in hubli
ಮೂರುಸಾವಿರಮಠದಲ್ಲಿ ಗೌಪ್ಯ ಸಭೆ

By

Published : Feb 5, 2021, 11:04 AM IST

ಹುಬ್ಬಳ್ಳಿ :ಪ್ರತಿಷ್ಠಿತ ಹುಬ್ಬಳ್ಳಿಯ ಮೂರು ಸಾವಿರಮಠದಲ್ಲಿ ಸ್ವಾಮೀಜಿಗಳಿಬ್ಬರ ಗೌಪ್ಯ ಸಭೆ ಕುತೂಹಲಕ್ಕೆ ಕಾರಣವಾಗಿದೆ. ಮೂರು ಸಾವಿರ ಮಠದ ಮೂಜಗುಶ್ರೀ ಮತ್ತು ತಿಪಟೂರಿನ ರುದ್ರಮುನಿ ಸ್ವಾಮಿಗಳ ನಡುವೆ ಮಹತ್ವದ ಮಾತುಕತೆ ನಡೆದಿರುವುದು ಸಾಕಷ್ಟು ಕುತೂಹಲವನ್ನುಂಟು ಮಾಡಿದೆ.

ಕಳೆದ ಒಂದು ವರ್ಷದಿಂದ ಮಠದ ಉತ್ತರಾಧಿಕಾರ ವಿವಾದ ಹಾಗೂ ಕಳೆದ ಸುಮಾರು ದಿನಗಳಿಂದ ಕೆಎಲ್ಇ ಸಂಸ್ಥೆಗೆ ಆಸ್ತಿ ನೀಡಿರುವ ಕುರಿತು ಸುದ್ದಿಯಲ್ಲಿದ್ದ ಮೂರುಸಾವಿರ ಮಠದಲ್ಲಿ ಗೌಪ್ಯ ಸಭೆ ನಡೆದಿದ್ದು ಹಲವು ಅನುಮಾನ ಹುಟ್ಟು ಹಾಕಿದೆ. ಮೂರು ಸಾವಿರ ಮಠದ ಆಸ್ತಿ ಪರಭಾರೆ ಕುರಿತು ಮಾತುಕತೆ ನಡೆದಿದೆ ಎನ್ನುವ ಅನುಮಾನ ಮಠದ ಭಕ್ತ ಸಮೂಹದಲ್ಲಿ ಮೂಡಿದೆ.

ಮೂರುಸಾವಿರಮಠದಲ್ಲಿ ಗೌಪ್ಯ ಸಭೆ

ಓದಿ : ತಾನೇ ಕಸ ಗುಡಿಸಿದ್ದ ಗ್ರಾಪಂಗೇ ಅಧ್ಯಕ್ಷಳಾದ ಸಿಪಾಯಿ.. ಇದೇ ಪ್ರಜಾಪ್ರಭುತ್ವದ ಸೊಬಗು..

ಕೆಎಲ್ಇ ಸಂಸ್ಥೆಗೆ ಕೋಟ್ಯಂತರ ರೂ.ಗಳ ಜಮೀನು ದಾನ ಮಾಡಿರುವ ಮೂರುಸಾವಿರ ಮಠದ ಸ್ವಾಮೀಜಿಗಳು, ದಿಂಗಾಲೇಶ್ವರ ಸ್ವಾಮೀಜಿ ಹೋರಾಟಕ್ಕೆ ಬೆಚ್ಚಿ ಬಿದ್ದಿದ್ದಾರೆ. ಮೂರುಸಾವಿರ ಮಠ ಬಿಟ್ಟು ಹಾನಗಲ್ ಮಠಕ್ಕೆ ಹೋಗಲು ತೀರ್ಮಾನಿಸಿದ್ದಾರೆಯೇ ಎಂಬುವಂತ ಸಾಕಷ್ಟು ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

ಈ ಹಿನ್ನೆಲೆಯಲ್ಲಿ ಮೂಜಗು ಶ್ರೀಗಳ ಮನ ಒಲಿಸಲು ರುದ್ರಮುನಿ ಸ್ವಾಮೀಜಿ ಬಂದಿದ್ದು, ಇವರು ಕೂಡ ‌ಮೂರುಸಾವಿರ ಮಠದ ಉತ್ತರಾಧಿಕಾರಿಯ ವಿವಾದಿತ ಸ್ವಾಮೀಜಿಯಾಗಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ABOUT THE AUTHOR

...view details