ಹುಬ್ಬಳ್ಳಿ: ಇಲ್ಲಿನ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಮಹಾನಗರ ಪಾಲಿಕೆ ಷರತ್ತುಬದ್ಧ ಅನುಮತಿ ಕೊಟ್ಟಿದೆ. ಎಐಎಂಐಎಂ ಮುಖಂಡ ವಿಜಯ ಗುಂಟ್ರಾಳ ಕೋರಿಕೆ ಮನ್ನಿಸಿ ಅವಕಾಶ ಕಲ್ಪಿಸಲಾಗಿತ್ತು. ಶಾಂತಿ ಸುವ್ಯವಸ್ಥೆ ಕಾಪಾಡಲು ಮೈದಾನದ ಸುತ್ತಮುತ್ತ ಪೊಲೀಸ್ ಕಣ್ಗಾವಲು ಹಾಕಲಾಗಿದೆ.
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ಅನುಮತಿ: ಷರತ್ತುಗಳೇನು? - 20 ಅಡಿ ಉದ್ದ 30 ಅಡಿ ಅಗಲ ಪೆಂಡಾಲ್
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಮಹಾನಗರ ಪಾಲಿಕೆ ಷರತ್ತುಬದ್ಧ ಅನುಮತಿ ನೀಡಿದೆ.
Permission for Tipu Jayanti at Hubli Eidgah Maidan What are the conditions
ಷರತ್ತುಗಳೇನು?:
- 10 ಸಾವಿರ ರೂಪಾಯಿ ಶುಲ್ಕ ಭರಿಸಬೇಕು.
- 20 ಅಡಿ ಉದ್ದ 30 ಅಡಿ ಅಗಲ ಪೆಂಡಾಲ್ ಹಾಕಬೇಕು.
- 3 ಬೈ 5 ಅಡಿ ಅಳತೆಯ ಟಿಪ್ಪು ಭಾವಚಿತ್ರಕ್ಕೆ ಮಾತ್ರ ಅವಕಾಶ ನೀಡಲಾಗಿದೆ.
- ಇದರ ಹೊರತಾಗಿ ಬೇರೆ ಯಾವುದೇ ಬಾವುಟ, ಧ್ವಜ, ಭಾವಚಿತ್ರ ಪ್ರದರ್ಶಿಸುವಂತಿಲ್ಲ.
- ಈದ್ಗಾ ಮೈದಾನದಲ್ಲಿರುವ ಆಸ್ತಿಗೆ ಯಾವುದೇ ಧಕ್ಕೆ ತರಬಾರದು.
- ಜಯಂತಿ ವೇಳೆ ಗಲಭೆ, ಗೊಂದಲಗಳಿಗೆ ಅವಕಾಶ ಮಾಡಬಾರದು.
- ಮಧ್ಯಾಹ್ನ 12 ಗಂಟೆಗೆ ಟಿಪ್ಪು ಜಯಂತಿ ಆಚರಣೆಗೆ ಅವಕಾಶ.
ಇದನ್ನೂ ಓದಿ: ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಪಾಲಿಕೆ ಅವಕಾಶ.. ಕಾಂಗ್ರೆಸ್, ಎಐಎಂಐಎಂ ಆಕ್ಷೇಪ