ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜಿಲ್ಲಾಡಳಿತ ಇಂದು ಮತ್ತು ನಾಳೆ ಸಂಪೂರ್ಣ ಲಾಕ್ಡೌನ್ಗೆ ಆದೇಶ ನೀಡಿದ್ದರಿಂದ ನಗರದ ಮಾರ್ಕೆಟ್ ಕಂಪ್ಲೀಟ್ ಕ್ಲೋಸ್ ಆಗಿದೆ.
ಹುಬ್ಬಳ್ಳಿ ಕಂಪ್ಲೀಟ್ ಲಾಕ್: ಬಿಕೋ ಎನ್ನುತ್ತಿವೆ ವಾಣಿಜ್ಯ ನಗರಿ ರಸ್ತೆಗಳು - ಹುಬ್ಬಳ್ಳಿಯಲ್ಲಿ ಸಂಪೂರ್ಣ ಲಾಕ್ಡೌನ್ ಸುದ್ದಿ
ಹುಬ್ಬಳ್ಳಿಯಲ್ಲಿ ಕೊರೊನಾ ತಡೆಗೆ ಜಿಲ್ಲಾಡಳಿತ ಇಂದು ಮತ್ತು ನಾಳೆ ಸಂಪೂರ್ಣ ಲಾಕ್ಡೌನ್ಗೆ ಆದೇಶ ನೀಡಿದೆ. ಇದರಿಂದ ನಗರದ ರಸ್ತೆಗಳೆಲ್ಲವೂ ಭಣಗುಡುತ್ತಿವೆ.
![ಹುಬ್ಬಳ್ಳಿ ಕಂಪ್ಲೀಟ್ ಲಾಕ್: ಬಿಕೋ ಎನ್ನುತ್ತಿವೆ ವಾಣಿಜ್ಯ ನಗರಿ ರಸ್ತೆಗಳು Complete lockdown in Hubli](https://etvbharatimages.akamaized.net/etvbharat/prod-images/768-512-11852165-112-11852165-1621651190354.jpg)
ಸದಾ ಜನರಿಂದ ಕೂಡಿರುತ್ತಿದ್ದ ಗಾಂಧಿ ಮಾರ್ಕೆಟ್ ಜನರಿಲ್ಲದೆ ಖಾಲಿ ಖಾಲಿ ಹೊಡೆಯುತ್ತಿದೆ. ಎಪಿಎಂಸಿ ಸೇರಿದಂತೆ ತರಕಾರಿ ಮಾರ್ಕೆಟ್ ಎಲ್ಲವೂ ಬಂದ್ ಆಗಿವೆ. ಹೂ, ಹಣ್ಣು, ದಿನಸಿ ಖರೀದಿಗೆ ಬೆಳಗ್ಗೆ 8 ಗಂಟೆವರೆಗೆ ಮಾತ್ರ ಅವಕಾಶವಿದೆ. ಬೆಳಗ್ಗೆ 8 ಗಂಟೆಯ ನಂತರ ಜನರ ಓಡಾಟಕ್ಕೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕ್ರಮ ತೆಗೆದುಕೊಂಡಿದೆ. ಹೀಗಾಗಿ ನಗರದ ಜನತೆ ಮನೆಯಿಂದ ಹೊರ ಬಂದಿಲ್ಲ. ಇದರಿಂದ ವಾಣಿಜ್ಯ ನಗರಿಯ ರಸ್ತೆಗಳು ಬಿಕೋ ಎನ್ನುತ್ತಿವೆ.
ಲಾಕ್ಡೌನ್ ವೇಳೆ ಬೆಳಗ್ಗೆ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಆದರೆ ಇಂದು ಮತ್ತು ನಾಳೆ 8 ಗಂಟೆ ಒಳಗೆ ಖರೀದಿಗೆ ಅವಕಾಶ ನೀಡಲಾಗಿದೆ.