ಧಾರವಾಡ: ನಡುರಸ್ತೆಯಲ್ಲಿ ಜೆಡಿಎಸ್ ಮುಖಂಡ ಮಹಿಳೆಯೋರ್ವರ ಕೈಹಿಡಿದು ಎಳೆದಾಡಿರುವ ಘಟನೆ ಸತ್ತೂರಿನ ಎಸ್‌ಡಿಎಂ ದಂತ ವೈದ್ಯಕೀಯ ಕಾಲೇಜು ಬಳಿ ನಡೆದಿದ್ದು, ಮಹಿಳೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಪರಿಚಯಸ್ತ ಮಹಿಳೆ ಹಾಗು ಜೆಡಿಎಸ್ ಮುಖಂಡನ ನಡುವೆ ಕೆಲವು ದಿನಗಳ ಹಿಂದೆ ಗಲಾಟೆ ನಡೆದಿತ್ತು. ಇದೇ ವಿಚಾರವಾಗಿ ಮತ್ತೆ ರಸ್ತೆಯಲ್ಲಿ ಗಲಾಟೆ ಮಾಡಿಕೊಂಡು ಎಳೆದಾಡಿದ್ದಾರೆ ಎಂಬ ಮಾಹಿತಿ ಇದೆ.