ಕರ್ನಾಟಕ

karnataka

ETV Bharat / state

ಮಠದಲ್ಲಿ ಸ್ವಾಮೀಜಿ ಬೆತ್ತಲೆ.. ಕಾನೂನು ಕ್ರಮಕ್ಕೆ ಸಂಘಟನೆಯ ಆಗ್ರಹ - ಅಯ್ಯಪ್ಪ ಸ್ವಾಮಿ ಪೀಠಾದೀಶರಾದ ಮೋಹನ್ ಗುರುಸ್ವಾಮಿ

ಮೋಹನ ಗುರುಸ್ವಾಮಿಯವರ ನಡೆ ಕೆಟ್ಟದಾಗಿದೆ. ಕೂಡಲೇ ಧಾರವಾಡ ಜಿಲ್ಲಾಧಿಕಾರಿಗಳು ಮೋಹನ್ ಗುರುಸ್ವಾಮಿ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕನ್ನಡ ಪರ ಸಂಘಟನೆಗಳು ಆಗ್ರಹ ಮಾಡಿದವು.

Complaint against mohan Guruswamy swamiji in hubli
ಕಾನೂನು ಕ್ರಮಕ್ಕೆ ಸಂಘಟನೆಯ ಆಗ್ರಹ

By

Published : May 8, 2020, 11:07 AM IST

ಹುಬ್ಬಳ್ಳಿ: ಶ್ರೀ ಸಿದ್ದಾರೂಢ ಮಠದ ಕಳಸ ಮಂಟಪದ ಆಶ್ರಮದಲ್ಲಿ ಅಯ್ಯಪ್ಪ ಸ್ವಾಮಿ ಪೀಠಾಧೀಶರಾದ ಮೋಹನ ಗುರುಸ್ವಾಮಿ ಸಾರಾಯಿ ಕುಡಿದು ಅರೆಬೆತ್ತಲೆ ಮಲಗಿರುವುದು ಖಂಡನೀಯ. ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕನ್ನಡ ಪರ ಸಂಘಟನೆಗಳು ತಹಶೀಲ್ದಾರ್​ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಹಿಂದೂ ಧಾರ್ಮಿಕ ಹಾಗೂ ಭಕ್ತಾದಿಗಳ ಭಾವನೆಗಳಿಗೆ ಧಕ್ಕೆ ತರುವಂತಹ ಕೆಲಸವನ್ನು ಮಾಡಿರುವ ಮೋಹನ ಗುರುಸ್ವಾಮಿಯವರ ನಡೆ ಕೆಟ್ಟದಾಗಿದೆ. ಕೂಡಲೇ ಧಾರವಾಡ ಜಿಲ್ಲಾಧಿಕಾರಿಗಳು ಮೋಹನ್ ಗುರುಸ್ವಾಮಿ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ಕಾನೂನು ಕ್ರಮ ಜರುಗಿಸದೇ ಇದ್ದ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ಸಹ ಈ ವೇಳೆ ನೀಡಿದರು.

ABOUT THE AUTHOR

...view details