ಕರ್ನಾಟಕ

karnataka

ETV Bharat / state

ಜನರಿಗೆ ಪೂರಕ ಮಾಹಿತಿ ಒದಗಿಸುವ ಕಮ್ಯುನಿಟಿ ರೇಡಿಯೋ - radio

10 ರಿಂದ 15 ಕಿಲೋ ಮೀಟರ್​​ ತರಂಗಾಂತರದಲ್ಲಿ‌ ಪ್ರಸಾರವಾಗುವ ಅಥವಾ ಕಮ್ಯುನಿಟಿಗೆ ಇರುವಂತಹ ರೇಡಿಯೋಗಳೇ ಕಮ್ಯುನಿಟಿ ರೇಡಿಯೋಗಳು. ನಿರ್ದಿಷ್ಟ ಪ್ರದೇಶದ ಕುರಿತು, ಅಲ್ಲಿನ ಜನರಿಗೆ ಪೂರಕವಾಗುವಂತಹ ಮಾಹಿತಿ ಇಲ್ಲಿ ಬಿತ್ತರಗೊಳ್ಳುತ್ತವೆ.

Community radio provides community information to people
ಜನರಿಗೆ ಪೂರಕ ಮಾಹಿತಿ ಒದಗಿಸುವ ಕಮ್ಯುನಿಟಿ ರೇಡಿಯೋ

By

Published : Apr 9, 2021, 7:35 PM IST

ಬೆಂಗಳೂರು/ಧಾರವಾಡ:ಒಂದು ಪ್ರದೇಶಕ್ಕೆ ಸೀಮಿತವಾಗಿ, ಅಲ್ಲಿರುವವರ ಅಭಿರುಚಿಗೆ ತಕ್ಕಂತೆ ಕಮ್ಯುನಿಟಿ ರೇಡಿಯೋಗಳು ಕಾರ್ಯ ನಿರ್ವಹಿಸುತ್ತವೆ. ಭಾರತದಲ್ಲಿ 300ಕ್ಕೂ ಹೆಚ್ಚು ಕಮ್ಯುನಿಟಿ ರೇಡಿಯೋಗಳಿದ್ದು, ಕರ್ನಾಟಕದಲ್ಲಿ 20 ರೇಡಿಯೋಗಳು ಕಾರ್ಯ ನಿರ್ವಹಿಸುತ್ತಿವೆ.

ಜನರಿಗೆ ಪೂರಕ ಮಾಹಿತಿ ಒದಗಿಸುವ ಕಮ್ಯುನಿಟಿ ರೇಡಿಯೋ

ಕೃಷಿ, ವಿದ್ಯೆ, ಉದ್ಯೋಗ, ಕಲೆ - ಸಂಸ್ಕೃತಿ, ಸ್ಥಳೀಯ ಸಾಧಕರ ಸಂದರ್ಶನ ಹೀಗೆ ನಾನಾ ರೀತಿಯ ಮಾಹಿತಿ ಸ್ಥಳೀಯ ಜನ - ಸಾಮಾನ್ಯರಿಗೆ ನೀಡುವ ಕೆಲಸವನ್ನು ರಾಜ್ಯ ರಾಜಧಾನಿಯ ಕಮ್ಯುನಿಟಿ ರೇಡಿಯೋಗಳು ಮಾಡುತ್ತಿವೆ.

ಇನ್ನೂ ಧಾರವಾಡ ಕೃಷಿ ವಿಶ್ವವಿದ್ಯಾನಿಲಯದಲ್ಲಿರುವ ಕೃಷಿ ಸಮುದಾಯ ಬಾನುಲಿ ಕೇಂದ್ರ ದೇಶದ ಮೊಟ್ಟಮೊದಲ ಕಮ್ಯುನಿಟಿ ರೇಡಿಯೋ ಹಾಗೂ ರೈತರ ರೇಡಿಯೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೃಷಿ ಪರ, ರೈತ ಪರ ಮಾಹಿತಿಯನ್ನು ಈ ಬಾನುಲಿ ಕೇಂದ್ರ ನೀಡುತ್ತಿದೆ.

2007ರ ಮೇ 17ರಂದು ಪ್ರಾರಂಭವಾದ ಕೃಷಿ ಸಮುದಾಯ ಬಾನುಲಿ ಕೇಂದ್ರವು ಶೇಕಡಾ 4ರಷ್ಟು ಕೇಳುಗರ ಸಂಖ್ಯೆ ಹೊಂದಿತ್ತು. ಇದೀಗ ಆ ಪ್ರಮಾಣ ಇದೀಗ ಶೇ. 65ಕ್ಕೆ ತಲುಪಿರುವುದು ಉತ್ತಮ ವಿಚಾರ.

ಇದನ್ನೂ ಓದಿ:ಆಶಾದಾಯಕ: ಉನ್ನತ ಶಿಕ್ಷಣ ಪಡೆಯೋದ್ರಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈ

ಇಲ್ಲಿ ಯಾವುದೇ ಸ್ಪರ್ಧೆಗೆ ಅವಕಾಶವಿಲ್ಲ. ಸಮುದಾಯವೊಂದರ ಜನ್ರಿಗೆ ಪೂರಕ ಮಾಹಿತಿ ಜತೆಗೆ ಒಂದಿಷ್ಟು ಮನೋರಂಜನೆ ನೀಡುವುದು. ತಮ್ಮ ಪ್ರದೇಶದ, ಸಮುದಾಯದ ಮಾಹಿತಿಯನ್ನು ತಿಳಿದುಕೊಳ್ಳಲು ಈ ಕಮ್ಯುನಿಟಿ ರೇಡಿಯೋಗಳು ಸಹಕಾರಿಯಾಗಿವೆ.

ABOUT THE AUTHOR

...view details