ಹುಬ್ಬಳ್ಳಿ: ಹಿಂದೂ ಧರ್ಮದಲ್ಲಿ ಮಕ್ಕಳ ಜವಳ(ಮುಡಿ) ತೆಗೆಯುವುದು ಸಾಮಾನ್ಯ. ಮುಸ್ಲಿಂ ಸಮುದಾಯದಲ್ಲಿ ಈ ಪದ್ಧತಿ ಇಲ್ಲ. ಆದರೆ ಇಲ್ಲೊಂದು ಮುಸ್ಲಿಂ ಕುಟುಂಬ ಮಸೀದಿಯಲ್ಲಿ ಮಗುವಿನ ಜವಳ ತೆಗೆಸುವ ಮೂಲಕ ಸರ್ವಧರ್ಮ ಸೌಹಾರ್ದತೆಗೆ ಸಾಕ್ಷಿಯಾಗಿದೆ.
ಮಸೀದಿಯಲ್ಲಿ ಜವಳ ಕಾರ್ಯಕ್ರಮ: ಭಾವೈಕ್ಯತೆ ಮೆರೆದ ಮುಸ್ಲಿಂ ದಂಪತಿ - ಮುಸ್ಲಿಂ ಆಚರಣೆ
ಧಾರ್ಮಿಕ ಸೌಹಾರ್ದ ಭಾವನೆ ಮೂಡಿಸಲು ಮುಸ್ಲಿಂ ದಂಪತಿ ವಿನೂತನ ಪ್ರಯತ್ನ ಮಾಡಿದ್ದಾರೆ. ತಮ್ಮ ಮಗುವಿಗೆ ಮಸೀದಿಯಲ್ಲೇ ಜವಳ ಕಾರ್ಯಕ್ರಮ ಹಮ್ಮಿಕೊಂಡು ಭಾವೈಕ್ಯತೆ ಮರೆದಿದ್ದಾರೆ.
ಧಾರ್ಮಿಕ ಸಾಮರಸ್ಯ
ಕುಂದಗೋಳ ತಾಲೂಕಿನ ಚಿಕ್ಕನೇರ್ತಿ ಗ್ರಾಮದ ಲಾಲಸಾಬ ನದಾಫ್ ಹಾಗೂ ಅಮೀನಾ ನದಾಫ್ ದಂಪತಿ ಇಂತಹ ಆಚರಣೆ ಮಾಡಿದ್ದಾರೆ. ಈ ಮೂಲಕ ತಮ್ಮ ಪುತ್ರಿ ಆರೀಫ್ ಎಂಬ ಮಗುವಿನ ಜವಳ ತೆಗೆಸುವ ಕಾರ್ಯಕ್ರಮವನ್ನು ಮಸೀದಿಯಲ್ಲಿ ಹಿಂದೂ-ಮುಸ್ಲಿಂ ಸಂಪ್ರದಾಯದಂತೆ ಮಾಡಿದ್ದು, ಭಾವೈಕ್ಯತೆ ಮೆರೆದಿದ್ದಾರೆ.
ಮಕ್ಕಳು ಕೇವಲ ಒಂದು ಜಾತಿಗೆ ಸೀಮಿತವಾಗಬಾರದು. ಸರ್ವ-ಧರ್ಮವನ್ನು ಗೌರವಿಸಬೇಕು ಎಂಬ ಸದುದ್ದೇಶದಿಂದ ದಂಪತಿ ಇಂತಹ ಮಹತ್ವದ ಕಾರ್ಯ ಮಾಡಿರುವುದು ವಿಶೇಷವಾಗಿದೆ. ಗ್ರಾಮದಲ್ಲಿ ಈ ದಂಪತಿಯ ಸೌಹಾರ್ದತೆಯ ಈ ನಡೆ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
Last Updated : Jun 25, 2020, 3:45 PM IST