ಹುಬ್ಬಳ್ಳಿ:ರಾಜ್ಯದಲ್ಲಿ ಮೀಸಲಾತಿ ಹೋರಾಟ ನಡೆಯುತ್ತಿದ್ದು, ಸಿಎಂ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ. ಇದಕ್ಕಾಗಿಯೆ ಸಂವಿಧಾನ, ಹಿಂದುಳಿದ ಆಯೋಗವಿದೆ, ನೋಡೋಣ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಶಾಸಕ ಯತ್ನಾಳ್ಗೆ ಶೋಕಾಸ್ ನೋಟಿಸ್ ನೀಡಿದ ವಿಚಾರವಾಗಿ ನಾನು ಈ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದರು.
ಇನ್ನು ಮೂರು ಸಾವಿರ ವಿವಾದದ ಕುರಿತಂತೆ ಪ್ರತಿಕ್ರಿಯಿಸಿ, ಮಠದ ಬಗ್ಗೆ ನಾನು ಮಾತನಾಡೋದಿಲ್ಲ. ಮಠದ ಉನ್ನತ ಮಟ್ಟದ ಕಮಿಟಿ ಸಭೆ ಕರೆಯುತ್ತೇವೆ ಎಂದರು.
ಜಗತ್ ಪ್ರಸಿದ್ಧ ಟೆಸ್ಲಾ ಕಂಪನಿ ರಾಜ್ಯಕ್ಕೆ ಬರುತ್ತಿದೆ. ಅವರು ತಮ್ಮ ಕಮರ್ಷಿಯಲ್ ಚಟುವಟಿಕೆಗಾಗಿ ಬೆಂಗಳೂರನ್ನು ಆಯ್ಕೆ ಮಾಡಿಕೊಂಡಿದ್ದು, ಅವರಿಗೆ ಎಲ್ಲಾ ನೆರವು ನೀಡುತ್ತೇವೆ. ಅವರು ಏನಾದರೂ ಎಲೆಕ್ಟ್ರಿಕಲ್ ವಾಹನ ಉತ್ಪಾದನೆ ಮಾಡಿದರೆ ನಮ್ಮ ಸರ್ಕಾರ ಸಹಾಯ ಮಾಡುತ್ತದೆ ಎಂದು ಭರವಸೆ ನೀಡಿದರು.