ಕರ್ನಾಟಕ

karnataka

ETV Bharat / state

ಶುಭವೋ ಅಶುಭವೋ ಅನ್ನೋದು ಮುಂದೆ ತಿಳಿಯಲಿದೆ: ಎಸ್​​ ಆರ್​ ಪಾಟೀಲ್​ ಹೀಗೆ ಹೇಳಿದ್ಯಾಕೆ? - CM said that the cabinet expanded to Feb 6

ಫೆ 6ಕ್ಕೆ ಸಂಪುಟ ವಿಸ್ತರಣೆಯಾಗಲಿದೆ ಎಂದು ಸಿಎಂ ತಿಳಿಸಿರುವುದಾಗಿ ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್ಆರ್ ಪಾಟೀಲ್​​ ಹೇಳಿದರು.

ಎಸ್ಆರ್ ಪಾಟಿಲ್
ಎಸ್ಆರ್ ಪಾಟಿಲ್

By

Published : Feb 3, 2020, 2:54 PM IST

ಹುಬ್ಬಳ್ಳಿ:ಫೆ 6ಕ್ಕೆ ಸಂಪುಟ ವಿಸ್ತರಣೆ ಆಗಲಿದೆ ಎಂದು ಸಿಎಂ ಹೇಳಿದ್ದಾರೆ. ನೋಡೋಣ ಏನಾಗಲಿದೆಯೊ ಎಂದು, ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್ಆರ್ ಪಾಟೀಲ್​​ ಹೇಳಿದರು.

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಸಂಪುಟ ವಿಸ್ತರಣೆ ನಂತರ ಸಾಕಷ್ಟು ಗೊಂದಲ, ಸಮಸ್ಯೆ ಉಂಟಾಗಲಿದೆ. ನಾನು ಮೊದಲೇ ಹೇಳಿದ್ದೆ, ಆ ರೀತಿ ಆಗುತ್ತದೆ ಎಂದುಕೊಂಡಿದ್ದೇನೆ. ಆದರೂ ಬಿಜೆಪಿಯವರಿಗೆ ಒಳ್ಳೆಯದಾಗಲಿ. ಶುಭವೋ ಅಶುಭವೋ ಅನ್ನೋದು ಮುಂದೆ ತಿಳಿಯಲಿದೆ ಎಂದರು.

ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಎಸ್ಆರ್ ಪಾಟಿಲ್

ಕೆಪಿಸಿಸಿ ಅಧ್ಯಕ್ಷರ ಆಯ್ಕೆಯ ಚೆಂಡು ಹೈಕಮಾಂಡ್ ಅಂಗಳದಲ್ಲಿದೆ. ಸೋನಿಯಾ ಗಾಂಧಿಯವರು ಅಧ್ಯಕ್ಷರ ಆಯ್ಕೆ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.

ABOUT THE AUTHOR

...view details