ಧಾರವಾಡ: ಎರಡೂ ರಾಜಕೀಯ ಪಕ್ಷದವರು ಭ್ರಮನಿರಸನ ಆಗಿದ್ದಾರೆ. ಅವರಿಗೆ ಜನರ ಚಿಂತೆ ಇಲ್ಲ, ಸರ್ಕಾರ ಹೇಗೆ ನಡೆಸಬೇಕು ಎಂಬುದು ಗೊತ್ತಿಲ್ಲ, ನಮ್ಮ ಪಕ್ಷಕ್ಕೆ ಕೈ ಹಾಕ್ತಾರೆ. ಕಾಂಗ್ರೆಸ್ಗೆ ವಿರೋಧ ಪಕ್ಷದಲ್ಲಿ ಕುಳಿತು ಅಭ್ಯಾಸವೇ ಇಲ್ಲ, ಬಿಜೆಪಿಗೆ ಅಧಿಕಾರ ನಡೆಸಿ ಅಭ್ಯಾಸ ಇಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಎರಡೂ ಪಕ್ಷಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಈ ಕುರಿತು ಮಾತನಾಡಿದ ಅವರು, ವಿರೋಧ ಪಕ್ಷದಲ್ಲಿ ಕುಳಿತು ಕಾಂಗ್ರೆಸ್ಗೆ ಅಭ್ಯಾಸ ಇಲ್ಲ, ಬಿಜೆಪಿಗೆ ಅಧಿಕಾರ ನಡೆಸಿ ಅಭ್ಯಾಸ ಇಲ್ಲ ಎರಡೂ ಪಕ್ಷಗಳು ದಾರಿ ತಪ್ಪಿವೆ. ರಾಹುಲ್ ಗಾಂಧಿ ಭಾರತ್ ಜೋಡೊ ಮಾಡುತಿದ್ದಾರೆ. ಅವರು ಮೊದಲು ಡಿಕೆಶಿ ಸಿದ್ದರಾಮಯ್ಯರನ್ನು ಜೋಡೊ ಮಾಡಬೇಕು. ಕಾಂಗ್ರೆಸ್ ಅವರು ನಮಗೆ ಹೇಳುತ್ತಾರೆ ಜೆಡಿಎಸ್ ಬಿಜೆಪಿಯ ಎರಡನೇ ಟೀಮ್ ಅಂತಾ. ಆದರೆ, ನಿಮ್ಮ ಪಕ್ಷದ 13 ಜನ ಶಾಸಕರು ಪಕ್ಷ ತೊರೆದು ಬಿಜೆಪಿ ಸೇರಿದರು, ಇದೆಲ್ಲ ನಿಮ್ಮ ಒಪ್ಪಿಗೆ ಇಲ್ಲದೇ ಆಯಿತಾ ಸಿದ್ದರಾಮಯ್ಯ ಎಂದು ಇಬ್ರಾಹಿಂ ಪ್ರಶ್ನಿಸಿದರು.
ರಾಷ್ಟ್ರೀಯ ಪಕ್ಷಗಳ ಬಗ್ಗೆ ಸಿಎಂ ಇಬ್ರಾಹಿಂ ಹೇಳಿಕೆ ಕುಮಾರಸ್ವಾಮಿಗೆ ಸಿಎಂ ಮಾಡಿದರು. ಆದರೇ 14 ತಿಂಗಳು ಸರ್ಕಾರ ನಡೆಯಲು ಬಿಡಲಿಲ್ಲ. ಇನ್ನು ಸಿದ್ದರಾಮಯ್ಯ ಅಧಿಕಾರವಧಿಯಲ್ಲಿ ಯಾರು ದುಡ್ಡು ಮಾಡಲಿಲ್ಲ ಹೇಳಿ. ಕೆಲವರು ಬೇಲ್ ಮೇಲೆ ಹೊರಗಿದ್ದಾರೆ, ಕೆಲವರು ಜೈಲ್ ನಲ್ಲಿದ್ದಾರೆ. ಬೇಲ್ ಮೇಲೆ ಇದ್ದವರು ಊರು ಹೊರಗೆ ಜನ್ಮದಿನ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ನಾನು ಆರ್ಎಸ್ಎಸ್ನ ಎಲ್ಲರ ಮೇಲೆ ಟೀಕೆ ಮಾಡಲ್ಲ, ತಿರುಗಾಡಲು ಚಪ್ಪಲಿ ಇರದ ಜೋಶಿ ಈಗ ನೂರಾರು ಕೋಟಿ ಮಾಡಿದ್ದಾರೆ. ಶೆಟ್ಟರ್ ಆಸ್ತಿ ಎಷ್ಟು ಎಂದು ಪ್ರಶ್ನಿಸಿದರು. ಈ ರಾಜ್ಯದಲ್ಲಿ ಶಾಂತಿ ನೆಲೆಸಬೇಕು. ಹಲಾಲ್ ಕಟ್ಟೋ ಜಟಕಾ ಕಟ್ಟೋ ಅಂತೆ, ನೀವು ರಾಜಕೀಯ ಮಾಡಲು ಬಂದಿದ್ದಿರಿ, ಇದು ಚರ್ಚೆ ಮಾಡುವ ವಿಷಯ ನಾ?. ಇನ್ನು ಪಠ್ಯಪುಸ್ತಕದಲ್ಲಿ ಅವರು ಬೇಡಾ ಇವರು ಬೇಡಾ ಎಂದು ಮಾಡುತ್ತಿದ್ದಾರೆ.
ಚಾಣಕ್ಯ ಹೇಳಿದ್ದ, ಯಾವ ದೇಶದ ರಾಜ ವ್ಯಾಪಾರಿ ಆಗುತ್ತಾನೋ, ಆ ದೇಶದ ಜನ ಬಿಕಾರಿ ಆಗುತ್ತಾರೆ ಎಂದು. ಇಂದು ದೇಶದಲ್ಲಿ ಪರಿಸ್ಥಿತಿ ಹಾಗೆಯೇ ಆಗಿದೆ. ಇಂದಿರಾಗಿಂತ ಹೆಚ್ಚು ಮೋದಿಗೆ ಅವಕಾಶ ಸಿಕ್ಕಿದೆ. ಆದರೆ ಇವರು ಹುಟ್ಟಸಿದ್ದು ಮಾತ್ರ ಅದಾನಿ ಮತ್ತು ಅಂಬಾನಿ ಅವರನ್ನು. ವಿಮಾನ ನಿಲ್ದಾಣಗಳನ್ನು ಮಾರಾಟ ಮಾಡುತ್ತಿರುವ ಇವರು ಹುಬ್ಬಳ್ಳಿ ವಿಮಾನ ನಿಲ್ದಾಣನ್ನೂ ಮಾರುತ್ತಾರೆ. ಆದರೆ ಗಿರಾಕಿ ಸಿಗುತ್ತಿಲ್ಲ. ಹೀಗೆ ಮಾಡಿ ದೇಶದ ಆಸ್ತಿ ಯಾರಿಗೆ ಕೊಡ್ತಾ ಇದಿರಿ ನೀವು ಎಂದು ಬಿಜೆಪಿಗರನ್ನು ಪ್ರಶ್ನಿಸಿದರು.
ಟಿಪ್ಪು ಜಯಂತಿಗೆ ಹುಬ್ಬಳ್ಳಿ ಮೈದಾನ ಕೇಳುವುದು ತಪ್ಪು. ಸಿದ್ದರಾಮಯ್ಯ ಸರ್ಕಾರ ಇದನ್ನೆಲ್ಲ ಮಾಡಿದ್ದು, ನಮ್ಮಲ್ಲಿ ಜಯಂತಿ ಪದ್ಧತಿ ಇಲ್ಲ, ಹಾರಾ ಹಾಕುವ ಪದ್ಧತಿಯೂ ಇಲ್ಲ. ಟಿಪ್ಪು ದೈವಭಕ್ತ, ಸರ್ವಧರ್ಮ ಪ್ರಿಯ , ಶೃಂಗೆರಿ ಶಾರದಾ ಪೀಠ ಉಳಿಸಿದವರು ಟಿಪ್ಪು ಎಂದು ಸಿಎಂ ಇಬ್ರಾಹಿಂ ನೆನಪಿಸಿದರು.
ಇದನ್ನೂ ಓದಿ:ಬಿಜೆಪಿ ಜನಸಂಕಲ್ಪ ಯಾತ್ರೆಗಿಂತ ಕ್ಷಮೆಯಾತ್ರೆ ಮಾಡಬೇಕು: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್