ಕರ್ನಾಟಕ

karnataka

ETV Bharat / state

ಕೋವಿಡ್​ ವಿಚಾರದಲ್ಲಿ ಪ್ರಧಾನಮಂತ್ರಿ ಸೂಚಿಸಿದಂತೆ ಕ್ರಮ ಕೈಗೊಳ್ಳಲಾಗಿದೆ: ಸಿಎಂ ಬೊಮ್ಮಾಯಿ - ಆಕ್ಸಿಜನ್

ಆಕ್ಸಿಜನ್, ಸೇರಿದಂತೆ ಅಗತ್ಯ ಸಿದ್ದತೆ ಮಾಡಿಕೊಳ್ಳುತ್ತೇವೆ. ಯಾರು ಆತಂಕ ಪಡುವ ಅಗತ್ಯವಿಲ್ಲ, ಮುನ್ನೆಚ್ಚರಿಕೆ ಇರಲಿ ಎಂದು ಸಿಎಂ ಬೊಮ್ಮಾಯಿ ಮನವಿ ಮಾಡಿದ್ದಾರೆ.

cm bommayi spoke in hubli
ಹುಬ್ಬಳ್ಳಿಯಲ್ಲಿ ಕೋವಿಡ್​ ವಿಚಾರ ಕುರಿತು ಮಾತನಾಡಿದ ಸಿಎಂ ಬೊಮ್ಮಾಯಿ

By

Published : Dec 24, 2022, 12:30 PM IST

Updated : Dec 24, 2022, 12:36 PM IST

ಹುಬ್ಬಳ್ಳಿಯಲ್ಲಿ ಕೋವಿಡ್​ ವಿಚಾರ ಕುರಿತು ಮಾತನಾಡಿದ ಸಿಎಂ ಬೊಮ್ಮಾಯಿ

ಹುಬ್ಬಳ್ಳಿ:ಕೋವಿಡ್ ವಿಚಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಭೆಯಲ್ಲಿ ಸೂಚಿಸಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬೂಸ್ಟರ್ ಡೋಸ್ ಕೊಡುವುದು, ಶಿಬಿರಗಳನ್ನು ಮಾಡಿ, ಟೆಸ್ಟಿಂಗ್ ಹೆಚ್ಚಿಸಲು ಸೂಚಿಸಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಹುಬ್ಬಳ್ಳಿಯ ಆದರ್ಶನಗರದ ಮನೆಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಕೊವಿಡ್ ಹಿನ್ನೆಲೆಯಲ್ಲಿ ಏರ್ಪೋಟ್​ಗಳಲ್ಲಿ ತಪಾಸಣೆ‌ ನಡೆಸಿ ಕಟ್ಟೆಚ್ಚರ ವಹಿಸಲಾಗುವುದು. ಹೊಸ ವರ್ಷಕ್ಕೆ ಹೊಸ ಗೈಡ್ ಲೈನ್​ ಬಗ್ಗೆ ಕಂದಾಯ ಸಚಿವ ಆರ್​.ಅಶೋಕ್​ ಮತ್ತು ಆರೋಗ್ಯ ಸಚಿವ ಸುಧಾಕರ್​ ಚರ್ಚೆ ಮಾಡಿ ತಿಳಿಸುತ್ತಾರೆ. ಈಗಾಗಲೇ ಆರೋಗ್ಯ ಸಚಿವರಿಗೆ ಸನ್ನದ್ಧರಾಗುವಂತೆ ಹಾಗೂ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದ್ದೇನೆ ಎಂದರು.

ಹಾಗೆ, ಆಕ್ಸಿಜನ್, ಸೇರಿದಂತೆ ಅಗತ್ಯ ಸಿದ್ದತೆ ಮಾಡಿಕೊಳ್ಳುತ್ತೇವೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ, ಮುನ್ನೆಚ್ಚರಿಕೆ ಇರಲಿ ಎಂದು ಅವರು ಮನವಿ ಮಾಡಿದರು. ಸದನದಲ್ಲಿ ಉತ್ತರ ಕರ್ನಾಟಕದ ವಿಚಾರಗಳ ಚರ್ಚೆ ಬಗ್ಗೆ ಮಾಧ್ಯಮ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದರ ಕುರಿತು ಕನಿಷ್ಠ ಎರಡ್ಮೂರು ದಿನ ಚರ್ಚೆ ಆಗಬೇಕು. ಸಭಾಪತಿಗಳ ಜೊತೆ ಇದೇ ವಿಚಾರ ಮಾತನಾಡಿದ್ದೇನೆ ಎಂದರು.

ಅವಧಿ ಪೂರ್ಣ ಚುನಾವಣೆ ವಿಚಾರವಾಗಿ ಮಾತನಾಡಿದ ಅವರು, ಅವಧಿ ಪೂರ್ಣ ಚುನಾವಣೆ ಹೋಗುವ ಮಾತೇ ಇಲ್ಲ. ಕಾಂಗ್ರೆಸ್ ನಾಯಕರಿಗೆ ಅಭದ್ರತೆ ಕಾಡುತ್ತಿದೆ. ಅವರ ಕಾರ್ಯಕರ್ತರನ್ನು ಸನ್ನದ್ಧ ಮಾಡಲು ಈ‌ ರೀತಿಯ ಹೇಳಿಕೆ‌ ನೀಡುತ್ತಿದ್ದಾರೆ ಎಂದರು.

ಇದನ್ನೂ ಓದಿ:ಎಂಇಎಸ್ ಮುಖಂಡರಿಗೆ ಬದ್ಧಿ ಮಾತು ಹೇಳಿದ ಎಡಿಜಿಪಿ ಅಲೋಕ್ ಕುಮಾರ್

Last Updated : Dec 24, 2022, 12:36 PM IST

ABOUT THE AUTHOR

...view details