ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಹಿರಿಯ ಮುಖಂಡ ಮೋರೆ ನಿವಾಸಕ್ಕೆ ಸಿಎಂ ಭೇಟಿ : ಕುಟುಂಬಸ್ಥರಿಗೆ ಧೈರ್ಯ ತುಂಬಿದ ಬೊಮ್ಮಾಯಿ - ಕಾಂಗ್ರೆಸ್ ಹಿರಿಯ ಮುಖಂಡ ಮೋರೆ ಮನೆಗೆ ಸಿಎಂ ಭೇಟಿ

ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಎಸ್.ಆರ್‌.ಮೋರೆ‌(82) ಅವರ ನಿವಾಸಕ್ಕೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು..

CM Bommai visited congress leader More residence
ಕಾಂಗ್ರೆಸ್ ಹಿರಿಯ ಮುಖಂಡ ಮೋರೆ ಮನೆಗೆ ಸಿಎಂ ಭೇಟಿ

By

Published : Dec 10, 2021, 3:37 PM IST

ಧಾರವಾಡ :ಅನಾರೋಗ್ಯದಿಂದ ನಿಧರಾದ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಎಸ್ ಆರ್‌ ಮೋರೆ‌ ಅವರ ನಿವಾಸಕ್ಕೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಭೇಟಿ ನೀಡಿದ್ದರು.

ಕಾಂಗ್ರೆಸ್ ಹಿರಿಯ ಮುಖಂಡರಾಗಿದ್ದ ದಿವಂಗತ ಎಸ್‌ ಆರ್‌ ಮೋರೆ ಕುಟುಂಬಸ್ಥರಿಗೆ ಸಿಎಂ ಸಾಂತ್ವನ..

ನಗರದ ಹೊಸ ಬಸ್ ನಿಲ್ದಾಣದ ಬಳಿಯಿರುವ ಮೋರೆಯವರ ಮನೆಗೆ ಸಿಎಂ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಮಾಧ್ಯಮಗಳೊಂದಿಗೆ ಮುಖ್ಯಮಂತ್ರಿಗಳು ಮಾತನಾಡಿದರು.

ಈ ಭಾಗದ ಹಿರಿಯ ನಾಯಕ ಮೋರೆಯವರು ನಾಲ್ಕು ದಶಕಗಳಿಂದ ಸಾರ್ವಜನಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿದ್ದರು. ಈ ಮೂಲಕ ಜನರ ಪ್ರೀತಿಗೆ ಪಾತ್ರರಾಗಿದ್ದರು. ಅವರಿಗೆ ಧಾರವಾಡ ಅಭಿವೃದ್ಧಿ ಬಗ್ಗೆ ಬಹಳಷ್ಟು ಕಳಕಳಿ ಇತ್ತು.

ವಿವಿಧ ಇಲಾಖೆಗಳ ಸಚಿವರಾಗಿ ಸಮರ್ಥವಾಗಿ ನಿಭಾಯಿಸಿದ್ದರು. ಪಕ್ಷ ಬೇರೆ ಇದ್ದರೂ ಮೋರೆಯವರ ಜೊತೆ ವೈಯಕ್ತಿಕ ಸಂಬಂಧ ಇತ್ತು. ಅಭಿವೃದ್ಧಿಗಾಗಿ ಒಗ್ಗಟ್ಟಾಗಿ ಕೆಲಸ ಮಾಡಿದ್ದೇವೆ. ಅದೆಲ್ಲವೂ ಈಗ ನೆನಪು ಆಗುತ್ತಿದೆ ಎಂದು ಅವರ ಕಾರ್ಯವನ್ನು ಸ್ಮರಿಸಿದರು.

ಇದೇ ವೇಳೆ ಕೇಂದ್ರ ಸಚಿವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು ಮಾತನಾಡಿ, ಮೋರೆಯವರು ರಾಜಕಾರಣದಲ್ಲಿ ಎಲ್ಲರ ಜೊತೆಗೆ‌ ಪಕ್ಷ ಭೇದ ಮರೆತು ಇದ್ದರು. ರಾಜಕೀಯ ಪಕ್ಷ ಬೇರೆ ಬೇರೆ‌ ಇದ್ದರೂ ಸಹಿತ ಎಲ್ಲರ ಜೊತೆ ಒಳ್ಳೆಯ ಸಂಬಂಧ ಹೊಂದಿದ್ದರು.

ಕಳೆದ 5 ದಿನಗಳ ಹಿಂದೆ ಅವರೊಂದಿಗೆ ಮಾತನಾಡಿದ್ದೆ. ಕೊನೆಗಳಿಗೆವರೆಗೂ ಸಾರ್ವಜನಿಕ ಕೆಲಸದ ಬಗ್ಗೆ ಅಪಾರ ಕಳಕಳಿ ಹೊಂದಿದ್ದರು ಎಂದರು. ಮೋರೆ ಅವರು ಅನಗತ್ಯ ಹಾಗೂ ವಿವಾದಾತ್ಮಕ ಹೇಳಿಕೆ‌ ಕೊಡುತಿರಲಿಲ್ಲ. ವಿರೋಧ ಪಕ್ಷದವರ ಬಗ್ಗೆ ಹಗುರ ಮಾತು ಆಡುತ್ತಿರಲಿಲ್ಲ.

ಎಲ್ಲರ ಸ್ನೇಹ ಹೊಂದಿದ್ದ ಅವರ ಅಗಲಿಕೆ ನಮಗೂ ನೋವು ತಂದಿದೆ. ಅವರ‌ ಆತ್ಮಕ್ಕೆ ಶಾಂತಿ ಕೊರುತ್ತೇನೆ. ಅವರ ಕುಟಂಬದವರಿಗೆ ಈ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವೆ ಎಂದರು.

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿಮೋರೆ ಅವರ ಗುಣಗಾನ ಮಾಡಿರುವುದು..

ಮಾಜಿ ಸಚಿವ ಎಸ್.ಆರ್. ಮೋರೆಕಳೆದ ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ನಾಲ್ಕು ಬಾರಿ ಧಾರವಾಡದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದ ಎಸ್.ಆರ್.ಮೋರೆ, ಬಂಗಾರಪ್ಪ ಹಾಗೂ ಧರಂಸಿಂಗ್ ಸರ್ಕಾರದಲ್ಲಿ ಸಚಿವರಾಗಿದ್ದರು.

ಬಂಗಾರಪ್ಪ ಸರ್ಕಾರದಲ್ಲಿ ಸಹಕಾರ ಸಚಿವ ಹಾಗೂ ಧರಂಸಿಂಗ್ ಸರ್ಕಾರದಲ್ಲಿ ಪೌರಾಡಳಿತ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ವಿಧಿಯಾಟವೆಂಬಂತೆ ಜನ್ಮದಿನದಂದೆ ಎಸ್.ಆರ್‌.ಮೋರೆ‌ ನಿಧನ ಹೊಂದಿದ್ದಾರೆ.

ಇದನ್ನೂ ಓದಿ: ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಚಿವ ಎಸ್.ಆರ್.ಮೋರೆ ನಿಧನ

ABOUT THE AUTHOR

...view details