ಹುಬ್ಬಳ್ಳಿ : ನಗರ ಪ್ರದೇಶಗಳ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ವಿಶೇಷ ಆಸಕ್ತಿ ವಹಿಸಿದ್ದಾರೆ. ಸ್ಮಾರ್ಟ್ ಸಿಟಿ ನರೇಂದ್ರ ಮೋದಿಯವರ ಕನಸಿನ ಯೋಜನೆ ಎಂದು ಸಿ ಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಜಿಲ್ಲೆಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಆಗಬೇಕೆಂಬುದು ಮೋದಿಯವರ ಕನಸು. ಹುಬ್ಬಳ್ಳಿ ಸ್ಮಾರ್ಟ್ ಸಿಟಿ ಯೋಜನೆಗೆ ಸಾಕಷ್ಟು ಹಣ ನೀಡಲಾಗಿದ್ದು, ಇಂದು ಸುಮಾರು 31.4 ಕೋಟಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.
ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ಪೂರ್ಣಗೊಳಿಸಲು ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ ಸ್ಮಾರ್ಟ್ ಸಿಟಿ ಕಾಮಗಾರಿ ಎರಡು ವರ್ಷದ ಹಿಂದೆಯೇ ಮುಗಿಯಬೇಕಿತ್ತು. ಆದರೆ ಇದರ ರೂಪುರೇಷೆ ತಯಾರು ಮಾಡುವ ಬಗ್ಗೆ ಗೊಂದಲ ಇದ್ದುದರಿಂದ ವಿಳಂಬವಾಗಿದೆ. ಜೊತೆಗೆ ಪಾಲಿಕೆಗಳು ಯೋಜನೆ ಅನುಷ್ಠಾನಕ್ಕೆ ಹಿಂದೇಟು ಹಾಕಿದ್ದವು. ಈ ರೀತಿಯ ಹಲವು ಕಾರಣಗಳಿಂದ ಕಾಮಗಾರಿ ಎರಡು ವರ್ಷ ಹಿಂದೆ ಉಳಿದಿದೆ. ಮುಂದಿನ ಒಂದು ವರ್ಷಗಳಲ್ಲಿ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳಬೇಕು. ಮೂಲಭೂತ ಸೌಕರ್ಯಗಳನ್ನು ಪೂರ್ಣಗೊಳಿಸಬೇಕು ಎಂದು ಆದೇಶಿಸಿದರು.
ಈ ಯೋಜನೆಗಳು ಪದೇ ಪದೇ ಬರಲ್ಲ. ಬಂದಾಗ ಸರಿಯಾಗಿ ಬಳಸಿಕೊಳ್ಳಬೇಕು. ಗುಣಮಟ್ಟ ಕಾಪಾಡದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವೇದಿಕೆಯ ಮೇಲೆಯೆ ಸ್ಮಾರ್ಟ್ ಸಿಟಿ ಎಂಡಿಗೆ ಹೇಳಿದರು. ಜೊತೆಗೆ ಕಾಲ ಮಿತಿಯೊಳಗೆ ಗುಣ್ಣಮಟ್ಟದ ಕಾಮಗಾರಿ ಪೂರ್ಣಗೊಳಿಸುವಂತೆ ಖಡಕ್ ಆದೇಶ ಮಾಡಿದರು.
ಓದಿ :ಅವತ್ತು ಕರ್ನಾಟಕ ಟು ಮುಂಬೈ, ಇವತ್ತು ಮುಂಬೈ ಟು ಗುವಾಹಟಿ: ಹೆಚ್ಡಿಕೆ ಕಿಡಿ