ಕರ್ನಾಟಕ

karnataka

ETV Bharat / state

MES ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದೇವೆ, ಬಂದ್​ಗೆ ಕರೆ ಬೇಡ ಎಂದು ಕನ್ನಡಪರ ಸಂಘಟನೆಗಳಿಗೆ ಬೊಮ್ಮಾಯಿ ಮನವಿ - ಎಂಇಎಸ್ ಪುಂಡಾಟಿಕೆ ವಿರೋಧಿಸಿ ಬಂದ್​

ಬಂದ್ ಮಾಡುವುದು ಎಲ್ಲದಕ್ಕೂ ಉತ್ತರವಲ್ಲ. ಅದೇ ರೀತಿ ಪರಿಹಾರ ಕೂಡ ಅಲ್ಲ. ಈ ನಿಟ್ಟಿನಲ್ಲಿ ರಾಜ್ಯ ಬಂದ್ ಕರೆ ನೀಡುವುದು ಬೇಡ ಎಂದು ಮಾಧ್ಯಮದ ಮೂಲಕ ಕನ್ನಡಪರ ಸಂಘಟನೆಗಳಿಗೆ ಮನವಿ ಮಾಡಿದ್ದಾರೆ..

cm-bommai
ಸಿಎಂ ಬಸವರಾಜ ಬೊಮ್ಮಾಯಿ

By

Published : Dec 29, 2021, 4:23 PM IST

ಹುಬ್ಬಳ್ಳಿ :ಎಂಇಎಸ್ ಪುಂಡಾಟಿಕೆ ವಿರೋಧಿಸಿ ಡಿಸೆಂಬರ್ 31ರಂದು ನಡೆಯಬೇಕಿದ್ದ ಬಂದ್​ಗೆ ಕರೆ ನೀಡದಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಕನ್ನಡ ಪರ ಸಂಘಟನೆಗಳಿಗೆ ಮನವಿ ಮಾಡಿದ್ದಾರೆ.

ಡಿ.31ರ ಬಂದ್‌ ಕುರಿತಂತೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿರುವುದು..

ನಗರದಲ್ಲಿಂದು ಕಾರ್ಯಕಾರಣಿ ಸಭೆಯ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಕನ್ನಡ ಪರ ಸಂಘಟನೆಗಳ ಆಶಯದಂತೆ ಕಟ್ಟುನಿಟ್ಟಿನ ಹಾಗೂ ಕಾನೂನು ಕ್ರಮಗಳನ್ನು ತೆಗೆದುಕೊಂಡಿದ್ದೇವೆ.

ಬಂದ್ ಮಾಡುವುದು ಎಲ್ಲದಕ್ಕೂ ಉತ್ತರವಲ್ಲ. ಅದೇ ರೀತಿ ಪರಿಹಾರ ಕೂಡ ಅಲ್ಲ. ಈ ನಿಟ್ಟಿನಲ್ಲಿ ರಾಜ್ಯ ಬಂದ್ ಕರೆ ನೀಡುವುದು ಬೇಡ ಎಂದು ಮಾಧ್ಯಮದ ಮೂಲಕ ಕನ್ನಡಪರ ಸಂಘಟನೆಗಳಿಗೆ ಮನವಿ ಮಾಡಿದ್ದಾರೆ.

ಎಂಇಎಸ್ ಬ್ಯಾನ್ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈ ಬಗ್ಗೆ ತನಿಖೆ ನಡೆಯುತ್ತಿದೆ. ಅಲ್ಲದೇ, ಇದರ ಬಗ್ಗೆ ಅಧಿವೇಶನದಲ್ಲಿಯೂ ಕೂಡ ಚರ್ಚೆ ಮಾಡಿದ್ದೇನೆ. ಕೂಡಲೇ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಅಲ್ಲದೇ, ಜನರು ಈಗ ಕೋವಿಡ್​ನಿಂದ ಹೊರ ಬಂದಿದ್ದಾರೆ. ಬಂದ್​ಗೆ ಕರೆ ನೀಡುವುದು ಸಮಂಜಸವಲ್ಲ ಎಂದು ಅವರು ಹೇಳಿದರು.

ಓದಿ:ಅಪಘಾತದಲ್ಲಿ ಬ್ರೈನ್ ಡೆಡ್ : 32 ವರ್ಷದ ಯುವಕನ‌ ಅಂಗಾಂಗ ದಾನ

ABOUT THE AUTHOR

...view details