ಕರ್ನಾಟಕ

karnataka

ETV Bharat / state

ಎರಡು ಕ್ಷೇತ್ರದಲ್ಲಿ ಸಿಎಂ ರೋಡ್ ಶೋ: ಧಾರವಾಡ ಗ್ರಾಮೀಣ, ಪಶ್ಚಿಮದಲ್ಲಿ ಭರ್ಜರಿ ಮತಬೇಟೆ - ಧಾರವಾಡ ಗ್ರಾಮೀಣ ಕ್ಷೇತ್ರ

ಧಾರವಾಡ ಗ್ರಾಮಾಂತರದ ಜನತೆ ರಾಜಕೀಯವಾಗಿ ಬಹಳ ಬುದ್ಧಿವಂತರು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಜಯವಾಹಿನಿ ಯಾತ್ರೆ ಬಹಿರಂಗ ಸಭೆಯಲ್ಲಿ ಹೇಳಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ

By

Published : Apr 25, 2023, 11:02 PM IST

ಸಿಎಂ ಬಸವರಾಜ ಬೊಮ್ಮಾಯಿ

ಧಾರವಾಡ: ಶಾಸಕ ಅಮೃತ ದೇಸಾಯಿ ಪರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೃಹತ್ ರೋಡ್ ಶೋ ನಡೆಸಿದರು. ಧಾರವಾಡ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ನಡೆದ ರೋಡ್​ ಶೋದಲ್ಲಿ ದೇಸಾಯಿ ಪರ ಮತಯಾಚನೆ ಮಾಡಿದರು. ಇದಕ್ಕೂ ಮೊದಲು ಅಮರಗೋಳ, ನವನಗರ, ನವಲೂರು ಸೇರಿದಂತೆ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಸಹ ಶಾಸಕ ಅರವಿಂದ ಬೆಲ್ಲದ ಪರವಾಗಿ ರೋಡ್ ಶೋ ಮಾಡಿದರು.

ಜಯವಾಹಿನಿ ಯಾತ್ರೆ ಬಹಿರಂಗ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಚುನಾವಣೆ ಕಾವು ಏರುತ್ತಿದೆ. ಧಾರವಾಡ ಗ್ರಾಮಾಂತರ ಜನತೆ ರಾಜಕೀಯವಾಗಿ ಬಹಳ ಬುದ್ಧಿವಂತರು. ಯಾರನ್ನು ಕುಳ್ಳರಿಸಬೇಕು, ಯಾರನ್ನು ಇಳಿಸಬೇಕು ಎಂಬುದು ನಿಮಗೆ ಚೆನ್ನಾಗಿ ಗೊತ್ತಿದೆ ಎಂದರು.

ಪ್ರವಾಹ ಬಂದಾಗ ಬೆಳೆ ನಾಶ, ಮನೆ ಹಾನಿ ಆಯ್ತು. ಹಿಂದಿನ ಯಾವುದೇ ಸರ್ಕಾರ ಮನೆ ಬಿದ್ದಾಗ 5 ಲಕ್ಷ ರೂ. ಕೊಟ್ಟಿದ್ರಾ?. ಕಾಂಗ್ರೆಸ್‌ನವರು ಮನೆ ಬಿದ್ದ ಬಹಳ ದಿನಗಳ ಬಳಿಕ 2 ಸಾವಿರ ರೂ ಕೊಡುತ್ತಿದ್ದರು. ಇಡೀ ದೇಶದಲ್ಲಿ ಯಾವುದೇ ರಾಜ್ಯದಲ್ಲಿ ಇಲ್ಲದ ಪರಿಹಾರ ನಾವು ಕೊಟ್ಟಿದ್ದೇವೆ. ಆ ಕಾರ್ಯ ಯಡಿಯೂರಪ್ಪ ಮಾಡಿದ್ದರು. ನಾನು ಸಿಎಂ ಆಗಿದ್ದಾಗಲೂ ಪ್ರವಾಹ ಬಂದಿತ್ತು. ಆಗ ಸಿದ್ದರಾಮಯ್ಯ ಏನು ಕೊಡ್ತಿರಿ ಪರಿಹಾರ ಅಂತಾ ಜಿಗಜಿಗಿದು ಕೇಳಿದ್ದರು. ಆಗ ಕೇಂದ್ರ ಕೊಡುವ ಪರಿಹಾರಕ್ಕೆ ಎರಡು ಪಟ್ಟು ಸೇರಿಸಿ ಕೊಡುತ್ತೇವೆ ಎಂದಿದ್ದೆ. ಅದರಂತೆಯೇ ಪರಿಹಾರ ಕೊಟ್ಟಿದ್ದೇವೆ ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.

ನಾವು ರೈತರ ಪರವಾಗಿ ಇದ್ದವರು. ರೈತ ಸಂಕಷ್ಟದಲ್ಲಿ ಇದ್ದಾಗ ಧಾವಿಸಿ ಕೆಲಸ ಮಾಡಿದ್ದು ಬಿಜೆಪಿ ಸರ್ಕಾರ. ಸಾಮಾಜಿಕ ನ್ಯಾಯ ಅಂತಾ ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದರು. ಆದರೆ ಅವರು ಯಾರಿಗೆ ನ್ಯಾಯ ಕೊಟ್ಟರು. ಹಿಂದುಳಿದವರು ಹಿಂದೆ ಉಳಿದರು. ಸಾಮಾಜಿಕ ನ್ಯಾಯದ ಮಾತು ಹೇಳುತ್ತ ಇವರು ಮುಂದೆ ಹೋದರು. ಶಾದಿ ಭಾಗ್ಯ ಕೊಟ್ಟಿದ್ದರು. ಎಲ್ಲರೂ ಮದುವೆ ಇವರೇ ಮಾಡುವವರಿದ್ದೆರೇನೋ? ಅವರವರ ಮಕ್ಕಳ‌ ಮದುವೆ ಮಾಡುವ ಶಕ್ತಿ ಎಲ್ಲರಿಗೂ ಇರುತ್ತದೆ‌. ಇವರು ಶಾದಿ ಭಾಗ್ಯ ಹೇಳಿದ್ದರು. ಆದರೆ ಮುಸ್ಲಿಂ ಬಾಂಧವರು ಇದಕ್ಕಾಗಿ ಓಡಾಡಿಯೇ ಸುಸ್ತಾದರು. ಮದುವೆಯಾದ ಎರಡು ವರ್ಷವಾದರೂ ಹಣ ಬರಲಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದರು.

ಅವರ ಎಲ್ಲ ಭಾಗ್ಯಗಳು ಜನರಿಗೆ ತಲುಪಲಿಲ್ಲ. ಹೀಗಾಗಿ ಅವರದು ದೌರ್ಭಾಗ್ಯ ಆಗಿದೆ. ಈಗ ಹೊಸ ಅಡ್ಡ ಸೋಗು ತೆಗೆದಿದ್ದಾರೆ. ನಾಟಕದ ಮಧ್ಯೆ ಅಡ್ಡ ಸೋಗು ಬರುತ್ತದೆ. ಹಾಗೆಯೇ ಕಾಂಗ್ರೆಸ್ ಗ್ಯಾರಂಟಿ ಯೋಜನೆಯ ಅಡ್ಡಸೋಗು ಹಾಕಿದೆ. ಅಡ್ಡ ಸೋಗು ಹಾಕಿಕೊಂಡು ಜನರ ಬಳಿ ಬಂದಿದೆ. ಹತ್ತು ಕೆಜಿ ಅಕ್ಕಿ ಅಂತಾ ಹೇಳುತ್ತಿದ್ದಾರೆ. ಹತ್ತು ಕೆಜಿ ಇದ್ದಿದ್ದನ್ನು 5 ಕೆಜಿಗೆ ಇಳಿಸಿದ್ದೇ ಕಾಂಗ್ರೆಸ್‌ನದು ಸಾಧನೆ. ಚುನಾವಣೆವರೆಗೂ ಮಾತ್ರ ಗ್ಯಾರಂಟಿ, ಆ ಬಳಿಕ ಗಳಗಂಟಿ. ಆದರೆ ಜನ ಬಹಳ ಬುದ್ಧಿವಂತರು. ಅವರದ್ದೇ ಗಂಟೆ ಬಾರಿಸಿ ನಡೆರಿ ಅಂತಾ ಕಳುಹಿಸುತ್ತಾರೆ ಎಂದರು.

ಇದನ್ನೂ ಓದಿ:ರಂಗೇರಿದ ಚುನಾವಣಾ ಕಣ: ಬಿಜೆಪಿಯ ಮಹಾ ಅಭಿಯಾನ.. ಅಮಿತ್​ ಶಾ ಸೇರಿ 98 ಪ್ರಭಾವಿ ನಾಯಕರಿಂದ ಮತಬೇಟೆ

ABOUT THE AUTHOR

...view details