ಕರ್ನಾಟಕ

karnataka

ETV Bharat / state

ಬಿಜೆಪಿಯ ಅಪ್ಪಟ್ಟ ಕಾರ್ಯಕರ್ತನೂ ಹೌದು, ಬಿಜೆಪಿಯ ಸಿಎಂ ಕೂಡ ಹೌದು: ಹೆಚ್​ಡಿಕೆಗೆ ಬೊಮ್ಮಾಯಿ ತಿರುಗೇಟು - ಹೆಚ್​ಡಿಕೆ ಹೇಳಿಕೆಗೆ ಬೊಮ್ಮಾಯಿ ಪ್ರತಿಕ್ರಿಯೆ

ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು ನಿಧಮರಾದ ರಾಜಶೇಖರ ಸಿಂಧೂರ ಅವರ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ತಿರುಗೇಟು ನೀಡಿದರು.

ಸಿಎಂ ಬಸವರಾಜ ಬೊಮ್ಮಾಯಿ
CM Basavaraj Bommai

By

Published : Aug 7, 2021, 5:04 PM IST

Updated : Aug 7, 2021, 5:35 PM IST

ಹುಬ್ಬಳ್ಳಿ: ನಾನು ಬಿಜೆಪಿಯ ಅಪ್ಪಟ್ಟ ಕಾರ್ಯಕರ್ತನು ಹೌದು, ಬಿಜೆಪಿಯ ಸಿಎಂ ಕೂಡ ಹೌದು. ಹೆಚ್​ಡಿಕೆ ಅವರು ಅಸಂಬದ್ಧ ಹೇಳಿಕೆಗಳನ್ನು ನೀಡಬಾರದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.

ಸಿಎಂ ಬಸವರಾಜ ಬೊಮ್ಮಾಯಿ

ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನತಾ ಪರಿವಾರವನ್ನು ಯಾವ ಸಂದರ್ಭದಲ್ಲಿ ಬಿಟ್ಟಿದ್ದೇನೆ ಎಂದು ಹೆಚ್​ಡಿಕೆಗೆ ಗೊತ್ತಿದೆ. ಇದೀಗ ಕಳೆದ 15 ವರ್ಷಗಳಿಂದ ಬಿಜೆಪಿಯಲ್ಲಿದ್ದೇನೆ. ದೇವೆಗೌಡರನ್ನು ಭೇಟಿ ಮಾಡಿದ್ದು, ಯಾವುದೇ ರಾಜಕೀಯವಲ್ಲ. ಅಲ್ಲಿ ಯಾವುದೇ ಚರ್ಚೆಯಾಗಿಲ್ಲ ಎಂದರು.

ಖಾತೆ ಹಂಚಿಕೆ ವಿಚಾರ:

ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಅಸಮಾಧಾನ ಸಹಜ. ಅದರಂತೆ ಆನಂದ ಸಿಂಗ್ ಕೂಡಾ ಹೇಳಿದ್ದಾರೆ. ಅವರು ನನ್ನ ಹಳೆಯ ಸ್ನೇಹಿತರು. ಅವರನ್ನು ಭೇಟಿ ಮಾಡಿ ಮಾತನಾಡುತ್ತೇನೆ. ಅವರು ಯಾವ ಖಾತೆ ಹೇಳಿದರು ಅನ್ನೋದು ಬಹಿರಂಗ ಪಡಿಸೋಕೆ ಆಗಲ್ಲ. ಇನ್ನು ಪ್ರೀತಂಗೌಡ ಯುವ ಉತ್ಸಾಹಿ ಶಾಸಕ. ಅವರು ಕೂಡಾ ನನ್ನ ಯುವ ಸ್ನೇಹಿತ. ಹಾಗಾಗಿ ಅವರೇನು ತಿಳಿದುಕೊಳ್ಳೋದು ಬೇಡ ಎಂದರು.

ಓದಿ: ಭುಗಿಲೆದ್ದ ಅಸಮಾಧಾನ.. ಸಚಿವ ಆನಂದ್ ಸಿಂಗ್ ಮುನಿಸು, ರಾಮುಲುರಿಂದಲೂ ಅತೃಪ್ತಿ ಮಾತು?

ಸಿಂಧೂರ ನಿಧನಕ್ಕೆ ಸಂತಾಪ:

ರಾಜಶೇಖರ ಸಿಂಧೂರ ಸಾವಿನಿಂದ ಬಹಳ ದುಃಖವಾಗಿದೆ. ನಾನು ಓರ್ವ ಆತ್ಮಿಯ ಗೆಳೆಯನನ್ನು‌ ಕಳೆದುಕೊಂಡಿದ್ದೇನೆ. ವೈಯುಕ್ತಿವಾಗಿಯೂ ನಂಗೆ ಬಹಳ ನಷ್ಟವಾಗಿದೆ. ಶಿಗ್ಗಾಂವಿ-ಸವಣೂರು ಕ್ಷೇತ್ರದ ಅಭೀವೃದ್ಧಿ ಬಗ್ಗೆ ಕನಸು ಕಂಡಿದ್ದರು. ಅವರ ಅಂತ್ಯಕ್ರಿಯೆಗೆ ಹೊಗುತ್ತಿದ್ದೇನೆ. ಅವರ ಕುಟುಂಬ ವರ್ಗಕ್ಕೆ ದುಃಖ ತಡೆಯುವ ಶಕ್ತಿ ಭಗವಂತ ನೀಡಲಿ ಎಂದರು.

Last Updated : Aug 7, 2021, 5:35 PM IST

ABOUT THE AUTHOR

...view details