ಬೆಂಗಳೂರು/ಧಾರವಾಡ :ಶೇ.5ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವ ಧಾರವಾಡ ಜಿಲ್ಲೆಗೂ ಅನ್‌ಲಾಕ್-2 ಮಾರ್ಗಸೂಚಿ ಅನ್ವಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ನಿನ್ನೆ ಹೊರಡಿಸಿದ ಅನ್‌ಲಾಕ್-2 ಪರಿಷ್ಕೃತ ಆದೇಶದಲ್ಲಿ ಧಾರವಾಡ ಜಿಲ್ಲೆಯನ್ನು ಕೈಬಿಡಲಾಗಿತ್ತು. ಧಾರವಾಡ ಜಿಲ್ಲೆಯನ್ನು ಶೇ.5ರಷ್ಟು ಪಾಸಿಟಿವಿಟಿ ಮೇಲ್ಪಟ್ಟ ಜಿಲ್ಲೆಯನ್ನಾಗಿ (ಕೆಟಗರಿ-2 ಜಿಲ್ಲೆ) ಪರಿಗಣಿಸಲಾಗಿತ್ತು. ಆದರೆ, ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ಪ್ರಮಾಣ ಸತತ 10 ದಿನಗಳಿಂದ ಶೇ.5ಕ್ಕಿಂತ ಕಡಿಮೆ ದಾಖಲಾಗುತ್ತಿದೆ.
ಹೀಗಿದ್ದರೂ ಗೊಂದಲದ ಹಿನ್ನೆಲೆ ಪಾಸಿಟಿವಿಟಿ ಪ್ರಮಾಣ ಶೇ.5ರಷ್ಟು ಮೇಲ್ಪಟ್ಟ ಜಿಲ್ಲೆಗಳ ಕೆಟಗರಿ-2 ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿತ್ತು. ಈ ಹಿನ್ನೆಲೆ ಧಾರವಾಡ ಜಿಲ್ಲೆಗೆ ಅನ್‌ಲಾಕ್-2 ಸಡಿಲಿಕೆಯಿಂದ ವಂಚಿತವಾಗಿತ್ತು. ಜಿಲ್ಲಾಡಳಿತದಿಂದ ಧಾರವಾಡ ಜಿಲ್ಲೆಯ ಸರಾಸರಿ ಪಡೆದು ಪರಿಶೀಲಿಸಿದಾಗ 4.5% ಕ್ಕಿಂತ ಕಡಿಮೆ ಇರುವುದು ಖಚಿತವಾಗಿದೆ.