ಹುಬ್ಬಳ್ಳಿ:ದಟ್ಟ ಮಂಜು-ಮೋಡಕವಿದ ವಾತಾವರಣವಿದ್ದ ಕಾರಣ ಬೆಂಗಳೂರಿನಿಂದ ಹುಬ್ಬಳ್ಳಿಗೆ ಇಂದು ಬೆಳಗ್ಗೆ ಆಗಮಿಸಿದ ಇಂಡಿಗೋ ವಿಮಾನ ಮಾರ್ಗ ಬದಲಿಸಿಕೊಂಡು ಮಂಗಳೂರಿನಲ್ಲಿ ಲ್ಯಾಂಡ್ ಆಗಿದೆ.
ಓದಿ: ಸಿಡಿ ಪ್ರಕರಣ: 5ನೇ ದಿನದ ವಿಚಾರಣೆ ಅಂತ್ಯ... ಯುವತಿಯನ್ನು ಗೌಪ್ಯ ಸ್ಥಳಕ್ಕೆ ಕರೆದೊಯ್ದ ಎಸ್ಐಟಿ

ಬೆಳಗ್ಗೆ ಸರಿಯಾಗಿ 7:20 ಗಂಟೆಗೆ ಆಗಮಿಸಿದ್ದ ವಿಮಾನ ನಗರದಲ್ಲಿ ದಟ್ಟ ಮಂಜು ಆವರಿಸಿದ್ದರಿಂದ ಲ್ಯಾಂಡಿಂಗ್ ಆಗಲು ಆಗದೆ ಆಗಸದಲ್ಲಿಯೇ ಸುಮಾರು 20 ನಿಮಿಷ ಸುತ್ತಾಡಿತು. ಎಟಿಎಸ್ ನಿಂದ ಸಿಗ್ನಲ್ ಸಿಗದ ಕಾರಣ ಕೊನೆಗೆ ಮಾರ್ಗ ಬದಲಿಸಿಕೊಂಡು ಮಂಗಳೂರಿಗೆ ತೆರಳಿತು. ವಿಮಾನದಲ್ಲಿ ಸುಮಾರು 65 ಪ್ರಯಾಣಿಕರು ಇದ್ದರು. ಹುಬ್ಬಳ್ಳಿಯಿಂದ ಬೆಂಗಳೂರಿಗೆ ಅಂದಾಜು 62 ಪ್ರಯಾಣಿಕರು ತೆರಳುವವರಿದ್ದರು.
ಇದೇ ಸಮಯದಲ್ಲಿ ಚೆನ್ನೈನಿಂದ ನಗರಕ್ಕೆ ಬೆಳಗ್ಗೆ 8:00 ಗಂಟೆಗೆ ಆಗಮಿಸಿದ್ದ ಇಂಡಿಗೋ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿ, ಮರಳಿ ಕೊಚ್ಚಿಗೆ ಪ್ರಯಾಣ ಬೆಳೆಸಿತು ಎಂದು ಮೂಲಗಳಿಂದ ತಿಳಿದು ಬಂದಿದೆ.