ಕರ್ನಾಟಕ

karnataka

ETV Bharat / state

ತೆರವು ಕಾರ್ಯಾಚರಣೆ ವಿರೋಧಿಸಿ ಪ್ರತಿಭಟನೆ: ವ್ಯಾಪಾರಸ್ಥರಿಗೆ ಕಾಂಗ್ರೆಸ್ ನಾಯಕರ ಬೆಂಬಲ - ಧಾರವಾಡ ಲೇಟೆಸ್ಟ್​​ ಅಪ್ಡೇಟ್​​ ನ್ಯೂಸ್​​

ಕೊರೊನಾ ಮಹಾಮಾರಿಯಿಂದ ಜನಜೀವನ ಸಂಕಷ್ಟಕ್ಕೆ ಸಿಲುಕಿದೆ. ಹಾಗಾಗಿ ಈ ಕಾರ್ಯಾಚರಣೆ ಸ್ಥಗಿತಗೊಳಿಸಬೇಕು ಎಂದು ವ್ಯಾಪಾರಸ್ಥರು ಆಗ್ರಹಿಸಿದ್ದಾರೆ.

Dharwad
ತೆರವು ಕಾರ್ಯಾಚರಣೆ ವಿರೋಧಿಸಿ ಪ್ರತಿಭಟನೆ

By

Published : Jul 11, 2021, 7:43 PM IST

ಧಾರವಾಡ:ನಗರದ ಸೂಪರ್ ಮಾರ್ಕೆಟ್​​ನಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಗೆ ಸ್ಥಳೀಯ ವ್ಯಾಪಾರಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಪಾಲಿಕೆಯಿಂದ ಕಾರ್ಯಾಚರಣೆಗೆ ಬಂದ ಜೆಸಿಬಿ ಮಷಿನ್‌ ಮುಂದೆ ಮಲಗುವ ಮೂಲಕ ವ್ಯಾಪಾರಸ್ಥರು ಆಕ್ರೋಶ ಹೊರಹಾಕಿದರು.

ಪಾಲಿಕೆ ಅಧಿಕಾರಿಗಳ ವಿರುದ್ಧ ಸ್ಥಳೀಯ ವ್ಯಾಪಾರಸ್ಥರು ಪ್ರತಿಭಟನೆಗೆ ಮುಂದಾಗಿದ್ದು, ಕಾಂಗ್ರೆಸ್ ನಾಯಕರು ಸಾಥ್ ನೀಡಿದ್ದಾರೆ. ಪರಿಸ್ಥಿತಿ ತಿಳಿಗೊಳಿಸಲು ಸ್ಥಳಕ್ಕೆ ಎಸಿಪಿ ಅನುಷಾ ಭೇಟಿ ನೀಡಿ ಗಲಾಟೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರು. ಈ ವೇಳೆ ಪೊಲೀಸರು ಹಾಗೂ ವ್ಯಾಪಾರಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು.

ತೆರವು ಕಾರ್ಯಾಚರಣೆಗೆ ವಿರೋಧ: ಜೆಸಿಬಿ ಮುಂದೆ ಮಲಗಿ ಆಕ್ರೋಶ ವ್ಯಕ್ತಪಡಿಸಿದ ವ್ಯಾಪಾರಸ್ಥರು

ಮಾಹಿತಿ ನೀಡದೆ ಏಕಾಏಕಿ ಅಂಗಡಿ ತೆರವು ಮಾಡ್ತಿರಾ? ಅಂಗಡಿ ಮಾಲಿಕರು ಎಲ್ಲಿ ಹೋಗಬೇಕು?. ಯಾವುದೇ ಪರಿಹಾರ ನೀಡಿಲ್ಲ. ಕೊರೊನಾ ಮಹಾಮಾರಿಯಿಂದ ಜನಜೀವನ ಸಂಕಷ್ಟಕ್ಕೆ ಸಿಲುಕಿದೆ. ಹಾಗಾಗಿ ಈ ಕಾರ್ಯಾಚರಣೆ ಸ್ಥಗಿತಗೊಳಿಸಬೇಕೆಂದು ವ್ಯಾಪಾರಸ್ಥರು ಆಗ್ರಹಿಸಿದರು.

ABOUT THE AUTHOR

...view details