ಕರ್ನಾಟಕ

karnataka

ETV Bharat / state

ಕಳಸಾ ಬಂಡೂರಿ ಹೋರಾಟಗಾರರು-ಪೊಲೀಸರ ನಡುವೆ ಮಾತಿನ ಚಕಮಕಿ - ಮಹದಾಯಿ ಯೋಜನೆ ಹೋರಾಟ ಕುರಿತಂತೆ ಸರ್ವ ಪಕ್ಷಗಳ ಸಭೆ

ಹುಬ್ಬಳ್ಳಿಯಲ್ಲಿ ಕಳಸಾ ಬಂಡೂರಿ ಹೋರಾಟಗಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ.

ಮಾತಿನ ಚಕಮಕಿ
ಮಾತಿನ ಚಕಮಕಿ

By

Published : Jan 5, 2020, 4:09 PM IST

ಹುಬ್ಬಳ್ಳಿ: ಕಳಸಾ ಬಂಡೂರಿ ಹೋರಾಟಗಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದ ಘಟನೆ ನಗರದ ಸರ್ಕಿಟ್ ಹೌಸ್ ಮುಂದೆ ನಡೆದಿದೆ.

ಕಳಸಾ ಬಂಡೂರಿ ಹೋರಾಟಗಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ

ನಗರದ ಸರ್ಕಿಟ್‌ ಹೌಸ್‌ನಲ್ಲಿ ಮಹದಾಯಿ ಯೋಜನೆ ಹೋರಾಟ ಕುರಿತಂತೆ ಸರ್ವಪಕ್ಷಗಳ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಭಾಗವಹಿಸಲು ಗದಗ ಜಿಲ್ಲೆಯಿಂದ ನೂರಾರು ಹೋರಾಟಗಾರರು ಆಗಮಿಸಿದ್ದರು. ಆದರೆ ಜನಪ್ರತಿನಿಧಿಗಳಿಗೆ ಮಾತ್ರ ಸಭೆಗೆ ಅವಕಾಶ ನೀಡಲಾಗಿತ್ತು. ಇದು ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿತ್ತು. ತಾವೂ ಕೂಡಾ ಸಭೆಯಲ್ಲಿ ಪಾಲ್ಗೊಳ್ಳಬೇಕೆಂದು ಪಟ್ಟುಹಿಡಿದ ಪ್ರತಿಭಟನಾಕಾರರು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಸಿದರು. ಆ ವೇಳೆ ಸ್ಥಳಕ್ಕೆ ಆಗಮಿಸಿದ ಬಸವರಾಜ್ ಹೊರಟ್ಟಿ ಹಾಗೂ ಎನ್.ಹೆಚ್.ಕೋನರೆಡ್ಡಿ ಮನವೊಲಿಸುವ ಕೆಲಸ ಮಾಡಿದರು. ಸಭೆಗೆ ರಾಜಕೀಯ ನಾಯಕರಿಗೆ ಮಾತ್ರ ಆಹ್ವಾನ ನೀಡಿದ್ದು, ಸಭೆಯ ನಂತರ ನಿರ್ಣಯಗಳನ್ನು ತಮಗೆ ತಿಳಿಸುವುದಾಗಿ ಹೇಳಿದರು.

For All Latest Updates

TAGGED:

ABOUT THE AUTHOR

...view details