ಕರ್ನಾಟಕ

karnataka

ETV Bharat / state

ಸಚಿವ ಶೆಟ್ಟರ್ ನಿವಾಸದ ಮುಂದೆ ಪೌರ ಕಾರ್ಮಿಕರ ಪ್ರತಿಭಟನೆ - Citizen workers protest

ಪೌರ ಕಾರ್ಮಿಕರಲ್ಲಿ ತಾರತಮ್ಯ ಮಾಡದೆ ಎಲ್ಲರನ್ನೂ ನೇರ ನೇಮಕಾತಿ ಹಾಗೂ ನೇರವೇತನಕ್ಕೆ ಸೇರ್ಪಡೆ ಮಾಡಬೇಕೆಂದು ಒತ್ತಾಯಿಸಿ ಪೌರ ಕಾರ್ಮಿಕರು ಪ್ರತಿಭಟನೆ ನಡೆಸಿದರು. ದಾಖಲೆಗಳಿಲ್ಲದ ಹಲವು ಪೌರ ಕಾರ್ಮಿಕರು ನೇಮಕಾತಿ ಪ್ರಕ್ರಿಯೆಯಿಂದ ದೂರ ಉಳಿಯುವಂತಾಗಿದೆ ಎಂದು ಸಚಿವ ಶೆಟ್ಟರ್​ ಎದುರು ಕಾರ್ಮಿಕರು ಅಳಲು ತೋಡಿಕೊಂಡರು.

civil-workers-protest-in-front-of-jagdish-shettar-residence
ಜಗದೀಶ್ ಶೆಟ್ಟರ್ ನಿವಾಸದ ಮುಂದೆ ಪೌರ ಕಾರ್ಮಿಕರ ಪ್ರತಿಭಟನೆ

By

Published : Oct 9, 2020, 4:27 PM IST

Updated : Oct 9, 2020, 4:46 PM IST

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಗುತ್ತಿಗೆ ಪೌರಕಾರ್ಮಿಕರಿಗೆ ನೇರನೇಮಕಾತಿ ಹಾಗೂ ನೇರವೇತನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಮನೆ ಮುಂದೆ ಪ್ರತಿಭಟನೆ ನಡೆಯಿತು.

ಪಾಲಿಕೆ ಮತ್ತು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಪೌರ ಕಾರ್ಮಿಕರಲ್ಲಿ ತಾರತಮ್ಯ ಮಾಡದೆ ಎಲ್ಲರನ್ನೂ ನೇರ ನೇಮಕಾತಿ ಹಾಗೂ ನೇರವೇತನಕ್ಕೆ ಸೇರ್ಪಡೆ ಮಾಡಬೇಕು. ಇಲ್ಲದಿದ್ದಲ್ಲಿ ಕಾರ್ಮಿಕರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದರು.

ಪೌರ ಕಾರ್ಮಿಕರಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಭರವಸೆ

ಸದ್ಯ ಹಲವು ವರ್ಷಗಳಿಂದ ದುಡಿಯುತ್ತಿರುವ ಕಾರ್ಮಿಕರ ಬಳಿ ದಾಖಲೆ ಇಲ್ಲದ ಹಿನ್ನೆಲೆ ನೇರವೇತನ, ನೇಮಕಾತಿಯಿಂದ ದೂರ ಉಳಿಯುವಂತಾಗಿದೆ. ನೇರ ನೇಮಕಾತಿ ಮಾಡಿಸಿಕೊಡುವುದಾಗಿ ಹೇಳಿ ಕೆಲ ಕಾರ್ಮಿಕ ಮುಖಂಡರು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ಕುರಿತಂತೆ ಸಚಿವ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿ, ಪೌರಕಾರ್ಮಿಕರ ಸಮಸ್ಯೆಗಳ ಬಗ್ಗೆ ನೇರವಾಗಿ ಭೇಟಿಯಾಗಿ, ಶೀಘ್ರದಲ್ಲೇ ಪೌರಕಾರ್ಮಿಕರ ನೇರ ನೇಮಕಾತಿ, ನೇರವೇತನ ಜಾರಿಯಾಗಲು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.

Last Updated : Oct 9, 2020, 4:46 PM IST

ABOUT THE AUTHOR

...view details