ಧಾರವಾಡ:ಕೊರೊನಾ ನಿಯಂತ್ರಣಕ್ಕೆ ಗಂಟಲು ದ್ರವ ಮಾದರಿಗಳನ್ನು ಹೆಚ್ಚು ಸಂಖ್ಯೆಯಲ್ಲಿ ಪರೀಕ್ಷೆಗೆ ಒಳಪಡಿಸಲು ಜಿಲ್ಲಾಡಳಿತ ಸಂಚಾರಿ ಗಂಟಲು ದ್ರವ ಸಂಗ್ರಹಣಾ ಕೇಂದ್ರ ರೂಪಿಸಿದ್ದು, ಸಚಿವ ಜಗದೀಶ್ ಶೆಟ್ಟರ್ ಚಾಲನೆ ನೀಡಿದರು.
ಸಂಚಾರಿ ಗಂಟಲು ದ್ರವ ಸಂಗ್ರಹಣಾ ಕೇಂದ್ರಕ್ಕೆ ಸಚಿವ ಶೆಟ್ಟರ್ ಚಾಲನೆ - ಸಂಚಾರಿ ಗಂಟಲು ದ್ರವ ಸಂಗ್ರಹಣಾ ಕೇಂದ್ರ
ಕೊರೊನಾ ಶಂಕಿತರ ಪರೀಕ್ಷೆ ಹೆಚ್ಚಿಸಲು ಜಿಲ್ಲಾಡಳಿತ ರೂಪಿಸಿದ ಸಂಚಾರಿ ಗಂಟಲು ದ್ರವ ಸಂಗ್ರಹಣಾ ಕೇಂದ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಚಾಲನೆ ನೀಡಿದರು.
![ಸಂಚಾರಿ ಗಂಟಲು ದ್ರವ ಸಂಗ್ರಹಣಾ ಕೇಂದ್ರಕ್ಕೆ ಸಚಿವ ಶೆಟ್ಟರ್ ಚಾಲನೆ Circulatory Throat Fluid Storage Center](https://etvbharatimages.akamaized.net/etvbharat/prod-images/768-512-6927429-612-6927429-1587748627014.jpg)
ಸಂಚಾರಿ ಗಂಟಲು ದ್ರವ ಸಂಗ್ರಹಣಾ ಕೇಂದ್ರಕ್ಕೆ ಶೆಟ್ಟರ್ ಚಾಲನೆ
ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸಂಚಾರಿ ಗಂಟಲು ದ್ರವ ಸಂಗ್ರಹಣೆ ಕೇಂದ್ರ ವೀಕ್ಷಿಸಿದ ಸಚಿವರು, ಅದರ ಕಾರ್ಯ ವಿಧಾನ, ಮಾದರಿ ಸಂಗ್ರಹಕ್ಕೆ ಅನುಸರಿಸುವ ಪದ್ಧತಿ, ಆರೋಗ್ಯ ಮುಂಜಾಗ್ರತೆ ಕ್ರಮಗಳು ಸೇರಿದಂತೆ ಮೊದಲಾದ ಅಂಶಗಳ ಬಗ್ಗೆ ಪರಿಶೀಲನೆ ನಡೆಸಿದರು.
ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಸಿ.ಎಂ.ನಿಂಬಣ್ಣವರ, ಶಂಕರ ಪಾಟೀಲ ಮುನೇನಕೊಪ್ಪ, ಪ್ರಸಾದ ಅಬ್ಬಯ್ಯ, ವಿಧಾನ ಪರಿಷತ್ ಸದಸ್ಯರಾದ ಪ್ರದೀಪ ಶೆಟ್ಟರ್, ಶ್ರೀನಿವಾಸ ಮಾನೆ, ಎಸ್.ವಿ.ಸಂಕನೂರ, ಜಿಲ್ಲಾಧಿಕಾರಿ ದೀಪಾ ಚೋಳನ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ. ಬಿ.ಸಿ.ಸತೀಶ್ ಇದ್ದರು.