ಧಾರವಾಡ: ಹಳೆಯ ದ್ವೇಷದ ಹಿನ್ನೆಲೆ ಚುರುಮುರಿ ಬಟ್ಟಿ ಶೆಡ್ ಒಂದನ್ನು ದುಷ್ಕರ್ಮಿಗಳು ಕೆಡವಿದ ಘಟನೆ ಜಿಲ್ಲೆಯ ಅಳ್ನಾವರ್ ಪಟ್ಟಣದಲ್ಲಿ ಸಂಭವಿಸಿದೆ.
ಹಳೆ ದ್ವೇಷ: ಚುರುಮುರಿ ಶೆಡ್ ಕೆಡವಿದ ದುಷ್ಕರ್ಮಿಗಳು - shed destroyed by enemy's
ಹಳೆಯ ದ್ವೇಷದ ಹಿನ್ನೆಲೆ ಅಳ್ನಾವರದ ಮಂಜುನಾಥ ಗಾಂಜಿ ಎನ್ನುವವರಿಗೆ ಸೇರಿದ ಚುರುಮುರಿ ಶೆಡ್ ಒಂದನ್ನು ದುಷ್ಕರ್ಮಿಗಳು ಕೆಡವಿದ ಘಟನೆ ಜಿಲ್ಲೆಯ ಅಳ್ನಾವರ್ ಪಟ್ಟಣದಲ್ಲಿ ಸಂಭವಿಸಿದೆ.
ಹಳೆ ದ್ವೇಷ : ಚುರುಮುರಿ ಶೆಡ್ ಕೆಡವಿದ ದುಷ್ಕರ್ಮಿಗಳು
ಅಳ್ನಾವರದ ಮಂಜುನಾಥ ಗಾಂಜಿ ಎನ್ನುವವರಿಗೆ ಸೇರಿದ ಚುರುಮುರಿ ಶೆಡ್ ಒಂದನ್ನು ನಿನ್ನೆ ರಾತ್ರಿ ದುಷ್ಕರ್ಮಿಗಳು ಕೆಡವಿದ್ದಾರೆ ಎಂಬ ಶಂಕೆ ವ್ಯಕ್ತಪಡಿಸಲಾಗಿದೆ.
ಹಲವು ವರ್ಷಗಳಿಂದ ಚುರುಮುರಿ ತಯಾರು ಮಾಡಿಕೊಂಡು ಬರುತ್ತಿದ್ದ ಮಂಜುನಾಥ ಗಾಂಜಿ, ಜಾಗದ ವಿಷಯವಾಗಿ ನ್ಯಾಯಾಲಯದಲ್ಲಿ ಧಾವೆ ಇದ್ದು, ಜಾಗ ಖಾಲಿ ಮಾಡಿಸಲು ದುಷ್ಕರ್ಮಿಗಳು ಶೆಡ್ ಕೆಡವಿದ್ದಾರೆ ಎಂದು ಶೆಡ್ ಮಾಲೀಕ ಮಂಜುನಾಥ ಗಾಂಜಿ ಅಳ್ನಾವರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಅಳ್ನಾವರದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.