ಧಾರವಾಡ:ಧಾರವಾಡದ ಜಿಲ್ಲಾಧಿಕಾರಿ ದೀಪಾ ಚೋಳನ ಅವರ ಸಹಾಯದಿಂದ ರಾಜಸ್ಥಾನಕ್ಕೆ ಹೊರಟಿದ್ದ ಮಕ್ಕಳು ಪಾಲಕರನ್ನು ಸೇರಲಾಗದೇ ಅರ್ಧ ದಾರಿಯಲ್ಲಿ ಲಾಕ್ ಆಗಿದ್ದಾರೆ.
ಜಿಲ್ಲಾಧಿಕಾರಿಗಳ ನೆರವಿನಿಂದ ರಾಜಸ್ಥಾನಕ್ಕೆ ಹೊರಟ್ಟಿದ್ದ ಮಕ್ಕಳ ಕಾರನ್ನು ಗುಜರಾತ್ನ ವಲ್ಸಾಡ ಬಳಿಯ ನಂದಿಗ್ರಾಮ್ ಚೆಕ್ ಪೋಸ್ಟ್ನಲ್ಲಿ ತಡೆಹಿಡಿಯಲಾಗಿದೆ. ಧಾರವಾಡ ಜಿಲ್ಲಾಡಳಿತದ ಎನ್‌ಒಸಿ ಇಲ್ಲ ಎಂಬ ಕಾರಣಕ್ಕೆ ಮಕ್ಕಳ ಗಾಡಿಯನ್ನು ತಡೆ ಹಿಡಿಯಲಾಗಿದೆ. ಗುಜರಾತ್ ರಾಜ್ಯದ ವಲ್ಸಾಡ ಪ್ರದೇಶದಲ್ಲಿ 8 ಗಂಟೆಗಳಿಂದ ವಾಹನದಲ್ಲಿ ಮಕ್ಕಳು ಕಾಯುತ್ತ ಕುಳಿತಿದ್ದಾರೆ.
ಲಾಕ್‌ಡೌನ್‌ಗೂ ಮೊದಲು ಮಕ್ಕಳನ್ನು ಮನೆ ಮಾಲೀಕರ ಬಳಿ ಪಾಲಕರು ಬಿಟ್ಟು ಹೋಗಿದ್ದರು. ಲಾಕ್‌ಡೌನ್ ಕಾರಣ ರಾಜಸ್ಥಾನದಲ್ಲೇ ಪಾಲಕರು ಲಾಕ್ ಆಗಿದ್ದರು. ಮಕ್ಕಳಿಗೂ ರಾಜಸ್ಥಾನಕ್ಕೆ ಹೋಗಲಾಗದ ಸ್ಥಿತಿ ಇತ್ತು. ವಿಷಯ ತಿಳಿದು ಧಾರವಾಡ ಜಿಲ್ಲಾಧಿಕಾರಿ ನೆರವಿಗೆ ಬಂದಿದ್ದರು.
ನಿನ್ನೆ ಬೆಳಗ್ಗೆ ಮಕ್ಕಳನ್ನು ಖುದ್ದು ಡಿಸಿ ಬೀಳ್ಕೊಟ್ಟಿದ್ದರು. ಅಧಿಕಾರಿಗಳು ಎನ್‌ಒಸಿ ಇಲ್ಲ ಎಂಬ ಕಾರಣಕ್ಕೆ ಅರ್ಧ ದಾರಿಯಲ್ಲೇ ತಡೆ ಹಿಡಿದಿದ್ದಾರೆ. ತವರು ಸೇರಲಾಗದೆ ವಾಪಸ್ ಬರಲಾಗದೇ ಮಕ್ಕಳು ಅರ್ಧ ದಾರಿಯಲ್ಲೇ ಲಾಕ್ ಆಗಿದ್ದಾರೆ. ರೋಮು ಕುಮಾರಿ, ಪೋಸು ಕುಮಾರಿ ಎಂಬ ಮಕ್ಕಳು ಇದೀಗ ಲಾಕ್ ಆಗಿದ್ದು, ತಾಲಸಾರಾಮ್ ದಂಪತಿಯ ಮಕ್ಕಳು ಹುಬ್ಬಳ್ಳಿಯ ಮರಾಠಾ ಗಲ್ಲಿಯಲ್ಲಿಯಲ್ಲಿದ್ದರು. ಸಿರೋಹಿ ಜಿಲ್ಲೆಯ ಮೆಮಂಡ್ವಾರ ಗ್ರಾಮಕ್ಕೆ ಮಕ್ಕಳು ತೆರಳುತ್ತಿದ್ದರು. ಮನೆಬಾಡಿಗೆ ನೀಡಿದ್ದ ಮಾಲೀಕರೇ ಮಕ್ಕಳನ್ನ ಬಿಟ್ಟು ಬರಲು ಹೊರಟಿದ್ದರು.