ಹುಬ್ಬಳ್ಳಿ:ಉಣಕಲ್ನ ಮೂರನೇ ತರಗತಿಯ ವಿದ್ಯಾರ್ಥಿನಿಯರಾದ ಅನನ್ಯ ಹಾಗೂ ಅಪೂರ್ವ ಎಂಬ ಸಹೋದರಿಯರು ಕೊರೊನಾ ಪರಿಹಾರ ನಿಧಿಗೆ ದೇಣಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.
ಬಹುಮಾನದ ಹಣವನ್ನು ಕೊರೊನಾ ಪರಿಹಾರ ನಿಧಿಗೆ ನೀಡಿದ ಸಹೋದರಿಯರು - ಮಾನವೀಯತೆ ಮೆರೆದ ಸಹೋದರಿಯರು
ಹುಬ್ಬಳ್ಳಿಯ ಸಹೊದರಿಯರಿಬ್ಬರು ತಮಗೆ ಬಹುಮಾನವಾಗಿ ಬಂದ ಹಣವನ್ನು ಕೊರೊನಾ ವೈರಸ್ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ.
ಬಹುಮಾನದ ಹಣವನ್ನು ಕೊರೊನಾ ಪರಿಹಾರ ನಿಧಿಗೆ ನೀಡಿದ ಸಹೋದರಿಯರು
ಈ ಇಬ್ಬರು ಸಹೋದರಿಯರು ಕರಾಟೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿದ್ದಾರೆ. ಕರಾಟೆ ಹಾಗೂ ನೃತ್ಯ ಪ್ರದರ್ಶನದಿಂದ ಬಂದ ಐದು ಸಾವಿರ ರೂಪಾಯಿ ಸಂಭಾವನೆಯನ್ನು ಕೊರೊನಾ ಪರಿಹಾರ ನಿಧಿಗೆ ನೀಡಿ ಇತರರಿಗೆ ಮಾದರಿಯಾಗಿದ್ದಾರೆ.
ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರ ಕಾರ್ಯವೈಖರಿ ಹಾಗೂ ಪ್ರಾಮಾಣಿಕತೆಯಿಂದ ಅವರ ಅಭಿಮಾನಿಗಳಾಗಿದ್ದು, ಮುಂದೆ ಜಿಲ್ಲಾಧಿಕಾರಿ ಆಗುವ ಆಸೆ ಹೊಂದಿದ್ದಾರೆ.