ಹುಬ್ಬಳ್ಳಿ:ಕಿಮ್ಸ್ ಆಸ್ಪತ್ರೆಯಲ್ಲಿ ಮಹಿಳೆಯ ಕೈಯಲ್ಲಿದ್ದ 40 ದಿನದ ಹಸುಗೂಸನ್ನು ಖದೀಮರು ಕದ್ದೊಯ್ದಿದ್ದಾರೆ. ಕುಂದಗೋಳದ ನೆಹರೂ ನಗರದ ಮಹಿಳೆ ಉಮ್ಮೇ ಜೈನಾಬ್ ಹುಸೇನ್ ಸಾಬ್ ಶೇಖ್ ಮಗು ಕಳೆದುಕೊಂಡವರು. ಜೂನ್ 10ರಂದು ಮಗುವನ್ನು ಇವರು ಆಸ್ಪತ್ರೆಗೆ ದಾಖಲಿಸಿದ್ದರು.
ಹುಬ್ಬಳ್ಳಿ: ಹಾಡಹಗಲೇ ಕೈಯಲ್ಲಿದ್ದ ಮಗು ಹೊತ್ತೊಯ್ದ ಖದೀಮರು - The child stole in the daytime at Hubli
ಕೈಯಲ್ಲಿದ್ದ ಮಗುವನ್ನು ಅಪರಿಚಿತರು ಕದ್ದೊಯ್ದಿರುವ ಘಟನೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.
ಕೈಯಲ್ಲಿದ್ದ ಮಗುವನ್ನ ಕದ್ದೊಯ್ದ ಖದೀಮರು
ತೂಕ ಹೆಚ್ಚಿಸಲು ಸರ್ಕಾರಿ ಆಸ್ಪತ್ರೆಯ ವೈದ್ಯರ ಸಲಹೆ ಮೇರೆಗೆ ಪೋಷಕರು ಮಗುವನ್ನು ಕಿಮ್ಸ್‌ಗೆ ದಾಖಲಿಸಿದ್ದರು. ಸೋಮವಾರ ಮಧ್ಯಾಹ್ನ ಏಕಾಏಕಿ ತಾಯಿಯ ಕೈಯಲ್ಲಿದ್ದ ಮಗುವನ್ನು ಕಿಡಿಗೇಡಿಗಳು ಕದ್ದೊಯ್ದಿದ್ದಾರೆ ಎಂದು ಷೋಷಕರು ದೂರು ನೀಡಿದ್ದಾರೆ.
ಇದನ್ನೂ ಓದಿ:ಮಂಗಳೂರಿನಲ್ಲಿ ಭಾರಿ ಪ್ರತಿಭಟನೆ ವದಂತಿ: ಮುಸ್ಲಿಂ ಮುಖಂಡರೊಂದಿಗೆ ಕಮಿಷನರ್ ಸಭೆ