ಹುಬ್ಬಳ್ಳಿ :ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಚಿಗರಿ ಬಸ್ ಸೇವೆ ಸುಗಮವಾಗಿ ನಡೆದಿರುವುದಕ್ಕಿಂತ ಅವಘಡ ಸಂಭವಿಸಿದ್ದೇ ಜಾಸ್ತಿ. ಅವಳಿ ನಗರದ ಮಧ್ಯೆ ಸಂಚಾರ ಮಾಡುತ್ತಿರುವ ಚಿಗರಿ ಬಸ್ಗಳ ಹಾವಳಿ ತಡೆದುಕೊಳ್ಳುವುದು ದುಸ್ತರವಾಗಿದೆ. ಇಂದು ಕೂಡ ಸಿಗ್ನಲ್ ಜಂಪ್ ಮಾಡಿ ಕಾರಿಗೆ ಡಿಕ್ಕಿ ಹೊಡೆದ ಘಟನೆ ವಿದ್ಯಾನಗರದ ಬಳಿ ಸಂಭವಿಸಿದೆ.
ಉಣಕಲ್ದಿಂದ ಬಂದು ವಿದ್ಯಾನಗರದ ಕಾಲೇಜು ಮುಂಭಾಗದಿಂದ ಮರಳಿ ಹೋಗುವ ಸಮಯದಲ್ಲಿ ಸಿಗ್ನಲ್ ಹಾಕದೇ ಇದ್ದರೂ, ಬಿಆರ್‌ಟಿಎಸ್ ಚಿಗರಿ ಬಸ್ ಬಂದು ಕಾರಿಗೆ ಡಿಕ್ಕಿ ಹೊಡೆದಿದೆ.