ಹುಬ್ಬಳ್ಳಿ:ಬಂಗಾರಕ್ಕೆ ಹಾಲ್ಮಾರ್ಕ್ ಹಾಕಿ ಕೊಡ್ತೀನಿ, ಕಲರ್ ಪಾಲಿಶ್ ಮಾಡುತ್ತೀನಿ ಎಂದು ಮೋಸ ಮಾಡುತ್ತಿದ್ದ ವಂಚಕನನ್ನು ಬಂಧಿಸುವಲ್ಲಿ ವಿದ್ಯಾನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಹಾಲ್ಮಾರ್ಕ್ ಹೆಸರಲ್ಲಿ ವಂಚನೆ: ವಿದ್ಯಾನಗರ ಪೊಲೀಸರಿಂದ ಆರೋಪಿಯ ಬಂಧನ - hubli Crime News
ಚಿನ್ನಕ್ಕೆ ಪಾಲಿಶ್ ಮತ್ತು ಹಾಲ್ಮಾರ್ಕ್ ಹಾಕುತ್ತೇನೆ ಎಂದು ನಂಬಿಸಿ ಗ್ರಾಹಕರಿಗೆ ವಂಚನೆ ಮಾಡುತ್ತಿದ್ದ ಖದೀಮ ಇದೀಗ ವಿದ್ಯಾನಗರ ಠಾಣೆ ಪೊಲೀಸರ ಅತಿಥಿಯಾಗಿದ್ದಾನೆ.
ವಿದ್ಯಾನಗರ ಪೊಲೀಸರಿಂದ ಆರೋಪಿ ಬಂಧನ
ಸುನಿಲ್ ಪತ್ತಾರ ಬಂಧಿತ ಆರೋಪಿ. ಈತ ಬಂಗಾರಕ್ಕೆ ಹಾಲ್ಮಾರ್ಕ್ ಮತ್ತು ಕಲರ್ ಪಾಲಿಶ್ ಮಾಡಿಕೊಡುತ್ತೇನೆ ಎಂದು ಹೇಳಿ ಸ್ವಲ್ಪ ಚಿನ್ನವನ್ನು ತೆಗೆದು ಬಳಿಕ ಅದಕ್ಕೆ ನಕಲಿ ವಸ್ತುಗಳನ್ನು ಸೇರಿಸಿ ಮೋಸ ಮಾಡುತ್ತಿದ್ದ. ಈ ವಿಚಾರ ತಿಳಿದ ಗ್ರಾಹಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಬಳಿಕ ಪ್ರಕರಣ ದಾಖಲಿಸಿಕೊಂಡು ದಾಳಿ ನಡೆಸಿದ ಪೊಲೀಸರು, ಸುನಿಲ್ ಬಳಿಯಿಂದ 20 ಲಕ್ಷ ರೂ. ಮೌಲ್ಯದ 330 ಗ್ರಾಂ ಚಿನ್ನಾಭರಣ ಹಾಗೂ 3.56 ಲಕ್ಷ ರೂ. ಜಪ್ತಿ ಮಾಡಿದ್ದಾರೆ.