ಕರ್ನಾಟಕ

karnataka

ETV Bharat / state

ಮಾತೆ ಗಂಗಾದೇವಿ ಅಧ್ಯಕ್ಷರಾದ ಮೇಲೆ ಪೀಠದಲ್ಲಿ ಎಲ್ಲವೂ ಸರಿ ಇಲ್ಲ: ಚನ್ನಬಸವಾನಂದ ಸ್ವಾಮೀಜಿ - ಬಸವ ಪೀಠದ ಅಧ್ಯಕ್ಷರಾದ ಗಂಗಾಮಾತೆ

ಮಾತೆ ಗಂಗಾದೇವಿ ಅಧ್ಯಕ್ಷರಾದ ಮೇಲೆ ಪೀಠದಲ್ಲಿ ಎಲ್ಲವೂ ಸರಿ ಇಲ್ಲ. ಕೆಲವು ಸ್ವಾರ್ಥಿಗಳು ಆಸ್ತಿ ಮೇಲೆ ಕಣ್ಣು ಹಾಕಿದ್ದಾರೆ ಎಂದು ಚನ್ನಬಸವಾನಂದ ಸ್ವಾಮೀಜಿ ಆರೋಪಿಸಿದ್ದಾರೆ.

ಚೆನ್ನ ಬಸವಾನಂದ ಸ್ವಾಮೀಜಿ
ಚೆನ್ನ ಬಸವಾನಂದ ಸ್ವಾಮೀಜಿ

By

Published : Oct 6, 2022, 9:17 PM IST

ಹುಬ್ಬಳ್ಳಿ:ಬಸವ ಧರ್ಮ ಪೀಠದಲ್ಲಿ ಅಪಸ್ವರ ಕೇಳಿ ಬಂದಿದೆ.‌ ಕುಂಬಳಗೋಡು ಬಸವ ಧರ್ಮ ಪೀಠದ ಚೆನ್ನ ಬಸವಾನಂದ ಸ್ವಾಮೀಜಿ ಇದೀಗ ಬಸವ ಪೀಠದ ಅಧ್ಯಕ್ಷರ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ.

ಚೆನ್ನ ಬಸವಾನಂದ ಸ್ವಾಮೀಜಿ ಅವರು ಮಾತನಾಡಿದರು

ಹುಬ್ಬಳ್ಳಿಯಲ್ಲಿ ಮಾತನಾಡಿದ ಚನ್ನಬಸವಾನಂದ ಸ್ವಾಮೀಜಿ, ಮಾತೆ ಗಂಗಾದೇವಿ ಅಧ್ಯಕ್ಷರಾದ ಮೇಲೆ ಪೀಠದಲ್ಲಿ ಎಲ್ಲವೂ ಸರಿ ಇಲ್ಲ. ಕೆಲವು ಸ್ವಾರ್ಥಿಗಳು ಆಸ್ತಿ ಮೇಲೆ ಕಣ್ಣು ಹಾಕಿದ್ದಾರೆ. ಬೀದರ್ ಬಸವರಾಜ್ ಅನ್ನೋರು ಆಸ್ತಿ ಹೊಡೆಯಲು ಸಂಚು ರೂಪಿಸಿದ್ದಾರೆ. ದೇಶದ ಎಲ್ಲ ಭಾಗದಲ್ಲಿ ನಮ್ಮ ಶಾಖೆಗಳಿವೆ. ಅದೆಲ್ಲದ್ದಕ್ಕೂ ಮಾತೆ ಗಂಗಾದೇವಿ ಅಧ್ಯಕ್ಷರಾಗಿದ್ದಾರೆ.

ಬಸವ ಪೀಠದ ಎಲ್ಲ ಟ್ರಸ್ಟ್ ಗಳಿಂದ ನಮ್ಮನ್ನ ಉಚ್ಛಾಟನೆ ಮಾಡಿದ್ದಾರೆ ಎಂದು ಹೇಳ್ತಿದ್ದಾರೆ. ಇದರಿಂದ ನಾನು ಕೋರ್ಟ್​ಗೆ ಹೋಗಿದ್ದೆ. ನ್ಯಾಯಾಲಯದಲ್ಲಿ ನನ್ನ ಪರ ಆದೇಶ ಬಂದಿದೆ. ನನ್ನ ಸಹಿ ನಕಲು ಮಾಡಿದ್ದಾರೆ. ಅವರ ವಿರುದ್ದ ನಾನು ದೂರು ದಾಖಲು ಮಾಡಿದ್ದೇನೆ ಎಂದರು.

ಪೂಜೆ ಮಾಡಲು ಸಂಧಾನ: ಸಿದ್ದರಾಮಸ್ವಾಮಿ ಅನ್ನುವವರ ವಿರುದ್ದ ದೂರು ದಾಖಲಾಗಿದೆ. ನನ್ನ ವಿರುದ್ದ ಷಡ್ಯಂತ್ರ ಮಾಡಿ ನನ್ನ ಸಹಿ ಪೋರ್ಜರಿ ಮಾಡಿದ್ದಾರೆ. ಬಸವಕಲ್ಯಾಣ ದಲ್ಲಿ ಇದೇ ಎಂಟರಿಂದ ಕಲ್ಯಾಣ ಪರ್ವ ಇದೆ. ಇದಕ್ಕೆ ನಮ್ಮನ್ನ ಸೇರಿಸಿಕೊಳ್ಳಲ್ಲ ಎಂದು ಮಾತೇ ಗಂಗಾಮಾತೆ ಹೇಳಿದ್ರು. ಹೀಗಾಗಿ ನಾನು ಪರ್ಯಾಯ ಕಲ್ಯಾಣ ಪರ್ವ ನಡೆಸಲು ನಿರ್ಧರಿಸಿದ್ದೆ‌. ಆದ್ರೆ ಅವರು ಪೊಲೀಸರು ಸಂಧಾನ ಮಾಡಿದ್ರು‌ ಎಂದಿದ್ದಾರೆ.

ಪರ್ಯಾಯ ಕಲ್ಯಾಣ ಮಾಡ್ತೀವಿ: ಇದೀಗ ಆಮಂತ್ರಣದಲ್ಲಿ ನಮ್ಮ ಹೆಸರು ಹಾಕಿಲ್ಲ. ಎಂಟರಿಂದ ನಡೆಯೋ ಕಲ್ಯಾಣ ಪರ್ವ ನಮ್ಮ ಅನುಯಾಯಿಗಳ ಹೆಸರಿಲ್ಲ. ಸಂಧಾನ ಮಾಡಿ ನಮಗೆ ಮೋಸ ಮಾಡಿದ್ದಾರೆ‌. ಇದೀಗ ನಾವು ಪರ್ಯಾಯ ಕಲ್ಯಾಣ ಪರ್ವ ಮಾಡಲು ನಿರ್ಧರಿಸಿದ್ದೇವೆ. ಬಸವ ಕಲ್ಯಾಣದಲ್ಲಿಯೇ ನಾವು ಪರ್ಯಾಯ ಕಲ್ಯಾಣ ಮಾಡ್ತೀವಿ. ನಮ್ಮನ್ನ ದೂರ ಇಡೋಕೆ ಬಸವ ಪೀಠದ ಅಧ್ಯಕ್ಷರಾದ ಗಂಗಾಮಾತೆ ಕಾರಣ ಎಂದು ಆರೋಪಿಸಿದರು.

ಓದಿ:ಇನ್ಮುಂದೆ ಕೂಡಲಸಂಗಮ ದೇವ ಅಂಕಿತನಾಮ‌ ಬಳಸಲಿದ್ದೇವೆ: ಮಾತೆ ಗಂಗಾದೇವಿ

ABOUT THE AUTHOR

...view details