ಕರ್ನಾಟಕ

karnataka

ETV Bharat / state

ಹುಬ್ಬಳ್ಳಿಯಲ್ಲಿ ಚಾಂಗದೇವ್ ಮಹಾರಾಜರ ಉರುಸು.. ಕೊರೊನಾ ಭೀತಿ ಬಿಟ್ಟು ಸಾವಿರಾರು ಭಕ್ತರು ಭಾಗಿ.. - ಹುಬ್ಬಳ್ಳಿಯಲ್ಲಿ ನಡೆದ ಚಾಂಗದೇವ ಮಹಾರಾಜ ಉರುಸು

ಯಾವುದೇ ಜಾತ್ರೆ ಹಾಗೂ ಸಮಾರಂಭದಲ್ಲಿ ಭಾಗಿಯಾಗುವಾಗ ಮಾಸ್ಕ್​ ಹಾಕಿಕೊಳ್ಳಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಭಕ್ತರು ಮಾತ್ರ ಯಾವುದೇ ಮುನ್ನೆಚ್ಚರಿಕೆ ವಹಿಸಿದೆ ಉರುಸಿನಲ್ಲಿ ಭಾಗಿಯಾಗಿದ್ದರು.

ಹುಬ್ಬಳ್ಳಿಯಲ್ಲಿ ನಡೆದ ಚಾಂಗದೇವ ಮಹಾರಾಜ ಉರುಸು
Changdev maharaj urusu

By

Published : Mar 14, 2020, 7:47 PM IST

ಹುಬ್ಬಳ್ಳಿ :ರಾಜ್ಯಾದ್ಯಂತ ಕೊರೊನಾ ಭೀತಿ ಹೆಚ್ಚಾಗುತ್ತಿದೆ. ಮುಂಜಾಗ್ರತ ಕ್ರಮವಾಗಿ ಜಿಲ್ಲಾಡಳಿತ ಸಭೆ-ಸಮಾರಂಭ,ಜಾತ್ರೆ ನಡೆಸದಂತೆ ಆದೇಶಿಸಿದ್ದಾರೆ. ಆದರೆ, ಹುಬ್ಬಳ್ಳಿಯಲ್ಲಿ ಮಾತ್ರ ಜನತಾ ಬಜಾರ್‌ನ ಹತ್ತಿರದ ದರ್ಗಾದ ಚಾಂಗದೇವ್ ಮಹಾರಾಜರ ಉರುಸಿನಲ್ಲಿ ಸಾವಿರಾರು ಭಕ್ತರು ಭಾಗಿಯಾಗಿದ್ದರು. ಉರುಸು ಅದ್ಧೂರಿಯಾಗಿ ಜರುಗಿತು.

ಹುಬ್ಬಳ್ಳಿಯಲ್ಲಿ ನಡೆದ ಚಾಂಗದೇವ್‌ ಮಹಾರಾಜರ ಉರುಸು..

ಪ್ರತಿವರ್ಷದಂತೆ ಈ ವರ್ಷವೂ ಚಾಂಗದೇವ್‌ ಮಹಾರಾಜರ ಉರುಸು ಅದ್ದೂರಿಯಾಗಿ ನಡೆದಿದೆ. ಉರುಸಿನಲ್ಲಿ ಹೆಣ್ಣುಮಕ್ಕಳು ಸಹ ನೂರಾರು ಸಂಖ್ಯೆಯಲ್ಲಿ ಭಾಗಿಯಾಗಿದ್ದರು. ಚಾಂಗದೇವ್‌ ಮಹಾರಾಜರ ದರ್ಶನ ಪಡೆಯಲು ಭಕ್ತರು ಸಾಲಿನಲ್ಲಿ ನಿಂತಿರುವ ದೃಶ್ಯ ಸಾಮಾನ್ಯವಾಗಿತ್ತು.

ಯಾವುದೇ ಜಾತ್ರೆ ಹಾಗೂ ಸಮಾರಂಭದಲ್ಲಿ ಭಾಗಿಯಾಗುವಾಗ ಮಾಸ್ಕ್​ ಹಾಕಿಕೊಳ್ಳಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಭಕ್ತರು ಮಾತ್ರ ಯಾವುದೇ ಮುನ್ನೆಚ್ಚರಿಕೆ ವಹಿಸಿದೆ ಉರುಸಿನಲ್ಲಿ ಭಾಗಿಯಾಗಿದ್ದರು.

ABOUT THE AUTHOR

...view details