ಕರ್ನಾಟಕ

karnataka

By

Published : Dec 30, 2022, 9:48 AM IST

ETV Bharat / state

ಕಳಸಾ ಬಂಡೂರಿಗೆ ಅನುಮೋದನೆ ಹಿನ್ನೆಲೆ: ಮುನೇನಕೊಪ್ಪಗೆ ಅದ್ಧೂರಿ ಮೆರವಣಿಗೆ

ಕಳಸಾ ಬಂಡೂರಿ ಡಿಪಿಆರ್‌ಗೆ ಅನುಮೋದನೆ - ಧಾರವಾಡದಲ್ಲಿ ಮುನೇನಕೊಪ್ಪಗೆ ಅದ್ಧೂರಿ ಮೆರವಣಿಗೆ - ಸಬ್ ಕಾ ಸಾಥ್ ಸಬ್ ಕಾ ವಿಕಾಸ್​ ರೀತಿಯಲ್ಲೇ ಮೀಸಲಾತಿ ಜಾರಿ.

Dharwad for approval of Kalasa Banduri
ಮುನೇನಕೊಪ್ಪಗೆ ಅದ್ಧೂರಿ ಮೆರವಣಿಗೆ

ಕಳಸಾ ಬಂಡೂರಿಗೆ ಅನುಮೋದನೆ ಸಿಕ್ಕ ಹಿನ್ನೆಲೆ ಮುನೇನಕೊಪ್ಪಗೆ ಅದ್ಧೂರಿ ಮೆರವಣಿಗೆ

ಧಾರವಾಡ: ಕಳಸಾ ಬಂಡೂರಿಗೆ ಅನುಮೋದನೆ ಹಿನ್ನೆಲೆ ನವಲಗುಂದ ಪಟ್ಟಣದಲ್ಲಿ ಅದ್ಧೂರಿಯಾಗಿ ವಿಜಯೋತ್ಸವ ಆಚರಿಸಲಾಯಿತು. ವಿಜಯೋತ್ಸವದಲ್ಲಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಭಾಗಿಯಾದರು. ನವಲಗುಂದದ ಪ್ರಮುಖ ಬೀದಿಗಳಲ್ಲಿ ತೆರೆದ ವಾಹನ ಮೂಲಕ ಸಚಿವರ ಮೆರವಣೆಗೆ ಮಾಡಲಾಯಿತು. ಈ ವೇಳೆ, ರೈತ ಭವನದಲ್ಲಿರುವ ಹುತಾತ್ಮ ರೈತರ ಸ್ಮಾರಕಕ್ಕೆ ಮುನೇನಕೊಪ್ಪ ಮಾಲಾರ್ಪಣೆ ಮಾಡಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕಳಸಾ - ಬಂಡೂರಿಗೆ ಗ್ರಿನ್ ಸಿಗ್ನಲ್ ಕೊಟ್ಟಿದೆ. ಈ ಭಾಗದ ಜನತೆ ಹರ್ಷದಿಂದ ನನ್ನನ್ನು ಸ್ವಾಗತಿಸಿದ್ದಾರೆ. ರೈತ ಬಂಧುಗಳ ಪರವಾಗಿ ಬೊಮ್ಮಾಯಿ, ಬಿಎಸ್‌ಐ, ಜಗದೀಶ ಶೆಟ್ಟರ್‌ಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಆರು ವರ್ಷದ ಹೋರಾಟದ ಫಲ:ಈ ನಾಡಿನ ಜನ ಬಿಜೆಪಿಯನ್ನೂ ಎಂದು ಮರೆಯುವುದಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಈ ಭಾಗದ ರೈತನ ಮಗನಾಗಿ ಅಭಿನಂದನೆ ಸಲ್ಲಿಸುತ್ತೇನೆ. ಇಲ್ಲಿನ ಜನ ಬಹಳ ತಾಳ್ಮೆಯಿಂದ ಆರು ವರ್ಷ ನಿರಂತರ ಹೋರಾಟ ಮಾಡಿದ್ದಾರೆ. ಆ ಹೋರಾಟದ ಪರಿಣಾಮವಾಗಿ ಕೇಂದ್ರ ಸರ್ಕಾರ ದೊಡ್ಡ ಕೊಡುಗೆ ನೀಡಿದೆ. ಶೀಘ್ರದಲ್ಲಿಯೇ ಭೂಮಿ ಪೂಜೆ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಸಬ್ ಕಾ ಸಾಥ್ ಸಬ್ ಕಾ ವಿಕಾಸ ಮೀಸಲಾತಿ:ಪಂಚಮಸಾಲಿ ಮೀಸಲಾತಿ ಪ್ರಕರಣ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಎಲ್ಲರನ್ನೂ ವಿಶ್ವಾಸಕ್ಕೆ ಸಿಎಂ ತೆಗೆದುಕೊಂಡಿದ್ದಾರೆ. ಇದು ಬಹುದೊಡ್ಡ ನಿರ್ಣಯ ಕೇವಲ ಪಂಚಮಸಾಲಿ ಮಾತ್ರವಲ್ಲ ಎಲ್ಲ ವರ್ಗದ ಜನರಿಗೆ ಕೊಡುಗೆ ಕೊಟ್ಟಿದ್ದಾರೆ. ಉದ್ಯೋಗ ಮತ್ತು ಶಿಕ್ಷಣಕ್ಕೆ ಎಲ್ಲ ವರ್ಗಕ್ಕೆ ಆದ್ಯತೆ ಕೊಟ್ಟಿದ್ದಾರೆ. ನಮ್ಮ ಕೇಂದ್ರ ಸರ್ಕಾರ ಸಹ ಸಹಕಾರ ಕೊಟ್ಟಿದೆ. ಎಲ್ಲ ವರ್ಗವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಪಕ್ಷ ಬಿಜೆಪಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ ಎಂಬುದನ್ನು ತೋರಿಸಿದ್ದೇವೆ ಇದು ನಮಗೆ ಹೆಮ್ಮೆ ಇದೆ ಎಂದರು.

ಇದನ್ನೂ ಓದಿ:ಮಹದಾಯಿ ಯೋಜನೆ ಡಿಪಿಆರ್​ಗೆ ಕೇಂದ್ರದ ಅನುಮತಿ: ಮೋದಿ, ಶಾಗೆ ಅಭಿನಂದನೆ ಸಲ್ಲಿಸಿದ ಸಿಎಂ ಬೊಮ್ಮಾಯಿ

ABOUT THE AUTHOR

...view details