ಧಾರವಾಡ: ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಮೃತ ಯೋಗೀಶಗೌಡ ಕೊಲೆ ಸಂಬಂಧ ಸಿಬಿಐ ತನಿಖೆ ಹಿನ್ನೆಲೆ ಮಾಜಿ ಸಚಿವರ ಆಪ್ತ ಸಹಾಯಕರನ್ನು ವಿಚಾರಣೆಗೆ ಕರೆಸಲಾಗಿದೆ.
ಯೋಗೀಶಗೌಡ ಕೊಲೆ ಪ್ರಕರಣ: ಮಾಜಿ ಸಚಿವರ ಆಪ್ತ ಸಹಾಯಕರ ವಿಚಾರಣೆ - cbi investigation in dharwad
ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೀಶಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಾಜಿ ಸಚಿವರ ಆಪ್ತ ಸಹಾಯಕರು ಎನ್ನಲಾದ ಪ್ರಶಾಂತ ಕೇಕರೆ ಎಂಬುವವರನ್ನ ಸಿಬಿಐ ವಿಚಾರಣೆಗೆ ಒಳಪಡಿಸಿದೆ.
ಮಾಜಿ ಸಚಿವರ ಆಪ್ತ ಸಹಾಯಕರ ವಿಚಾರಣೆ
ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಆಪ್ತ ಸಹಾಯಕರು ಎನ್ನಲಾದ ಪ್ರಶಾಂತ ಕೇಕರೆ ಅವರನ್ನು ವಿಚಾರಣೆಗಾಗಿ ಧಾರವಾಡ ಉಪನಗರ ಪೊಲೀಸ್ ಠಾಣೆಗೆ ಕರೆಸಲಾಗಿತ್ತು.
ಇದೇ ವೇಳೆ ಮೃತ ಯೋಗೀಶಗೌಡ ಪತ್ನಿ ಮಲ್ಲಮ್ಮ ಹಾಗೂ ಸಹೋದರಿ ಸುಮಾ ಸೇರಿದಂತೆ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಿವಾನಂದ ಕರಿಗಾರ ವಿಚಾರಣೆ ಮುಗಿಸಿ, ತೆರಳಿದರು.