ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯ ಹುಬ್ಬಳ್ಳಿ ವಿಭಾಗ (ಪಶ್ಚಿಮ) ಜೇಷ್ಠ ವಿಭಾಗೀಯ ಇಂಜಿನಿಯರ್ ನೀರಜ್ ಭಾಪಣಾ ಕಚೇರಿ ಮೇಲೆ ಸಿಬಿಐ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿ: ರೈಲ್ವೆ ಇಂಜಿನಿಯರ್ ಕಚೇರಿ ಮೇಲೆ ಸಿಬಿಐ ದಾಳಿ - ರೈಲ್ವೆ ಇಂಜಿನಿಯರ್ ಕಚೇರಿಯ ಮೇಲೆ ಸಿಬಿಐ ದಾಳಿ
ಜೇಷ್ಠ ವಿಭಾಗೀಯ ಇಂಜಿನಿಯರ್ ನೀರಜ್ ಭಾಪಣಾ ಕಚೇರಿ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ವಿಚಾರಣೆ ನಡೆಸುತ್ತಿದ್ದಾರೆ.
ಸಿಬಿಐ ದಾಳಿ
ಕಳೆದ ವರ್ಷವಷ್ಟೇ ಬೆಂಗಳೂರಿನಿಂದ ಹುಬ್ಬಳ್ಳಿಗೆ ವರ್ಗವಾಗಿದ್ದ ನೀರಜ್ ಭಾಪಣಾ ಅವರ ವಿರುದ್ಧ ಬೆಂಗಳೂರು ಸಿಬಿಐ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೇಳಲಾಗುತ್ತಿದೆ. ದಾಳಿಯ ವಿವರ ಬಹಿರಂಗ ಮಾಡಲು ಸಿಬಿಐ ಅಧಿಕಾರಿಗಳು ನಿರಾಕರಿಸಿದ್ದಾರೆ.
ನಗರದ ಗದಗ ರೈಲ್ವೆ ಡಿಆರ್ ಎಂಬ ಕಚೇರಿಯಲ್ಲಿರುವ ನೀರಜ್ ಬಾಫಣಾ ಕಚೇರಿಯ ಮೇಲೆ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳು, ಬೆಳಗ್ಗೆಯಿಂದಲೇ ನೀರಜ್ ಭಾಪಣಾ ವಿಚಾರಣೆ ನಡೆಸುತ್ತಿದ್ದಾರೆ.