ಧಾರವಾಡ: ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ ಅವರನ್ನು ಸಿಬಿಐ ವಿಚಾರಣೆಗೊಳಪಡಿಸಿತು.
ಧಾರವಾಡ ಉಪನಗರ ಠಾಣೆಯಲ್ಲಿ ಕೆಲಹೊತ್ತು ಸಿಬಿಐ ಅಧಿಕಾರಿಗಳು ಕರಿಗಾರ ಅವರನ್ನು ವಿಚಾರಣೆ ನಡೆಸಿ ಮಾಹಿತಿ ಕಲೆಹಾಕಿದರು. ವಿಚಾರಣೆ ಬಳಿಕ ಹೊರಬಂದ ಕರಿಗಾರ ಸುದ್ದಿಗಾರರೊಂದಿಗೆ ಮಾತನಾಡಿ, 2016ರಲ್ಲಿ ಯೋಗೇಶ್ ಗೌಡ ಇದ್ದಾಗ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆ ನಡೆದಿತ್ತು. ಅಂದಿನ ಆ ಸಭೆಯ ವಿಚಾರವಾಗಿಯೇ ಕೇಳಲು ನನ್ನನ್ನು ಕರೆಯಿಸಿದ್ದರು ಎಂದು ಹೇಳಿದರು.