ಹುಬ್ಬಳ್ಳಿ :ಜಿಪಂ ಸದಸ್ಯ ಯೋಗೇಶ್ ಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಕೈ ಮುಖಂಡ ನಾಗರಾಜ್ ಗೌರಿ ಅವರನ್ನು ಸಿಬಿಐ ಅಧಿಕಾರಿಗಳು ಕರೆದಿದ್ದರು. ಈ ಹಿನ್ನೆಲೆ ಹುಬ್ಬಳ್ಳಿಯ ಸಿಎಆರ್ ಮೈದಾನಕ್ಕೆ ನಾಗರಾಜ್ ಗೌರಿ ಅವರು ಕುಟುಂಬ ಸಮೇತ ಆಗಮಿಸಿದ್ದರು.
ವಿಚಾರಣೆಗೆ ಹೋಗುವಾಗ ಕುಟುಂಬ ಸದಸ್ಯರನ್ನ ಹೊರಗಡೆ ಬಿಟ್ಟು ನಾಗರಾಜ್ ಗೌರಿ ಒಳಗೆ ಹೋದರು. ಈ ಹಿಂದೆಯು ನಾಗರಾಜ್ ಗೌರಿಯನ್ನು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ನಾಗರಾಜ್ ಗೌರಿ, ವಿನಯ್ ಕುಲಕರ್ಣಿ ಆಪ್ತನಾಗಿದ್ದು, ಮೃತ ಯೋಗೇಶ್ ಗೌಡ ಪತ್ನಿ ಮಲ್ಲಮ್ಮ ಕಾಂಗ್ರೆಸ್ ಸೇರ್ಪಡೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.