ಕರ್ನಾಟಕ

karnataka

ETV Bharat / state

ಜಾತಿ ರಾಜಕಾರಣ ಮಾಡೋದು ಗೌಡರ ಕುಟುಂಬಕ್ಕೆ ಗೌರವ ತರುವಂತದ್ದಲ್ಲ : ಅರವಿಂದ್ ಬೆಲ್ಲದ್ ಆರೋಪ - ಶಾಸಕ ಅರವಿಂದ್ ಬೆಲ್ಲದ್ ಕಿಡಿ

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಟೀಕೆ- ಹೆಚ್​ಡಿಕೆಯವರದ್ದು ಬೇಜವಾಬ್ದಾರಿ ಹೇಳಿಕೆ- ಶಾಸಕ ಅರವಿಂದ್ ಬೆಲ್ಲದ್ ಕಿಡಿ

MLA Arvind Bellad
ಶಾಸಕ ಅರವಿಂದ್ ಬೆಲ್ಲದ್

By

Published : Feb 5, 2023, 5:58 PM IST

Updated : Feb 5, 2023, 6:28 PM IST

ಹೆಚ್​ ಡಿ ಕುಮಾರಸ್ವಾಮಿ ಹೇಳಿಕೆಗೆ ಶಾಸಕ ಅರವಿಂದ್ ಬೆಲ್ಲದ್ ಪ್ರತಿಕ್ರಿಯೆ

ಧಾರವಾಡ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಮಾಜಿ ಮುಖ್ಯಮಂತ್ರಿ, ಜೆಡಿಎಸ್​ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಅರವಿಂದ್ ಬೆಲ್ಲದ್ ಕಿಡಿಕಾರಿದ್ದಾರೆ. ಮಹಾ ಮುತ್ಸದ್ಧಿ ರಾಜಕಾರಣಿ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಮಗ ಕುಮಾರಸ್ವಾಮಿ ಅವರು ಬೇಜವಾಬ್ದಾರಿ ಮತ್ತು ತಳಬುಡ ಇಲ್ಲದ ಹೇಳಿಕೆ ನೀಡಿರೋದು, ಅವರ ಮಾನಸಿಕ ಸ್ಥಿಮಿತತೆ ತಪ್ಪಿದೆ ಅನಿಸುತ್ತೆ ಎಂದು ವಾಗ್ದಾಳಿ ನಡೆಸಿದರು.

ಮಾಜಿ ಸಿಎಂ ಇಂಥ ಹೇಳಿಕೆ ನೀಡಿದ್ದು ದುರದೃಷ್ಟಕರ: ನಗರಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಗೂ ಮುನ್ನವೇ ಅವರ ಜೆಡಿಎಸ್​ ಪಕ್ಷದಿಂದ ಜನ ಓಡಿ ಹೊರಟಿದ್ದಾರೆ.‌ ಅವರ ನಾಯಕರೇ ಅವರ ವಿರುದ್ಧ ಬಂಡೆದಿದ್ದಾರೆ. ಹೀಗಾಗಿ ಅವರಿಗೆ ಏನು ಮಾಡಬೇಕು, ಏನು ಮಾತನಾಡಬೇಕು ಅನ್ನೋದು ಗೊತ್ತಾಗುತ್ತಿಲ್ಲ. ಹೀಗಾಗಿ ಈ ರೀತಿಯ ಹೇಳಿಕೆ ನೀಡಿರೋದು ದುರದೃಷ್ಟಕರ ಎಂದು ಬೆಲ್ಲದ್​ ಟಾಂಗ್​ ಕೊಟ್ಟರು.

ಕೇಂದ್ರ ಸರ್ಕಾರದಲ್ಲಿ ಮೋದಿ ಅವರು ಜಾತಿ, ಪಂಥ ನೋಡದೇ ಯೋಗ್ಯರಿದ್ದವರಿಗೆ ಮಾತ್ರ ಅಧಿಕಾರ ನೀಡಿದ್ದಾರೆ. ಕ್ಷುಲ್ಲಕ ರಾಜಕಾರಣ ಹಾಗೂ ಜಾತಿ ರಾಜಕಾರಣ ಮಾಡೋದು ಗೌರವ ತರಲ್ಲ. ಅದರಲ್ಲೂ ದೇವೇಗೌಡರ ಕುಟುಂಬಕ್ಕೆ ಗೌರವ ತರುವಂತದ್ದಲ್ಲ, ಕುಮಾರಸ್ವಾಮಿ ಅವರು ಇಂಥ ಅರ್ಥವಿಲ್ಲದ ಹೇಳಿಕೆಯಿಂದ ಹೆಚ್​ ಡಿ ದೇವೇಗೌಡರು, ಹೆಚ್​ ಡಿ ರೇವಣ್ಣ ಸೇರಿ ಇಡೀ ಕುಟುಂಬಕ್ಕೆ ಕಳಂಕ ತಂದಿದ್ದಾರೆ ಎಂದು ಅಪಾದಿಸಿದ್ದಾರೆ.

ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆ ಕೆಳಮಟ್ಟದ್ದಿದೆ. ಅವರ ಕುಟುಂಬ ಅಂದ್ರೇನೇ ಜೆಡಿಎಸ್​ ಪಕ್ಷ, ಅವರ ಕುಟುಂಬದವರು ಸಹ ಅವರ ಹೇಳಿಕೆಯನ್ನು ಖಂಡಿಸುತ್ತಾರೆ. ಮಾಜಿ ಸಿಎಂ ಕುಮಾರಸ್ವಾಮಿ ಅವರು ಜನರ ನಡುವಿನ ಸಾಮರಸ್ಯವನ್ನು ಕೆಡಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕುಮಾರಸ್ವಾಮಿ ಆರೋಪ ಏನು?ಪ್ರಹ್ಲಾದ್ ಜೋಶಿ ಅವರನ್ನು ಸಿಎಂ ಮಾಡಿ, 8 ಮಂದಿ ಉಪಮುಖ್ಯಮಂತ್ರಿ ಮಾಡುವ ಪ್ಲಾನ್ ಬಗ್ಗೆ ಆರ್​ಎಸ್ ಎಸ್ ದೆಹಲಿ ಕಚೇರಿಯಲ್ಲಿ ಚರ್ಚೆ ನಡೆಸಿದೆ. ಪ್ರಹ್ಲಾದ್ ಜೋಶಿ ಅವರನ್ನು ಬಿಜೆಪಿ ಮುಂದಿನ ಸಿಎಂ ಮಾಡಲು ಆರ್ ಎಸ್ ಎಸ್ ನಿರ್ಧಾರ ಮಾಡಿದೆ ಎಂದು ಬೆಂಗಳೂರಿನ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಪಂಚರತ್ನಯಾತ್ರೆ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದ್ದರು.

ನಮ್ಮ ಹಳೇ ಮೈಸೂರು ಭಾಗದ ಬ್ರಾಹ್ಮಣರು ಸರ್ವೇ ಜನೋ ಸುಖಿನೋ ಭವಂತು ಎನ್ನುವವರು. ಆದರೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಮಹಾರಾಷ್ಟ್ರದ ಪೇಶ್ವೆ ವಂಶಕ್ಕೆ ಸೇರಿದವರು. ಅವರಿಗೆ ಸಂಸ್ಕೃತಿ ಇಲ್ಲ. ಅವರಿಗೆ ದೇಶ ಒಡೆಯುವಂತದ್ದು, ಕುತಂತ್ರ ರಾಜಕಾರಣ ಮಾಡುವಂತದ್ದು, ದೇಶಭಕ್ತಿಯ ಹೆಸರಲ್ಲಿ ದೇಶಕ್ಕೆ ಕೊಡುಗೆ ಕೊಟ್ಟಂತವರನ್ನು ಮಾರಣಹೋಮ ಮಾಡುವಂತದ್ದು. ಈ ವರ್ಗದವರಿಂದ ಬಂದವರ ಕೃತ್ಯ. ರಾಜ್ಯದ ವೀರಶೈವ, ಒಕ್ಕಲಿಗ, ಹಿಂದುಳಿದ, ದಲಿತ ಸಮುದಾಯ ಬಿಜೆಪಿಯ ಆರ್ ಎಸ್ ಎಸ್ ಹುನ್ನಾರಕ್ಕೆ ಮರುಳಾಗಬೇಡಿ. ಈ ರಾಜ್ಯವನ್ನು ಅವರು ಒಡೆಯುತ್ತಾರೆ. ರಾಜ್ಯವನ್ನು ಕುಲಗೆಡಿಸುವ ಇಂಥವರ ವಿರುದ್ಧ ನನ್ನ ಹೋರಾಟ ಎಂದು ಕುಮಾರಸ್ವಾಮಿ ಹೇಳಿದ್ದರು.

ಇದನ್ನೂಓದಿ:ಜಿ20 ದೇಶಗಳ ಪ್ರಸ್ತುತ ಆರ್ಥಿಕತೆಗೆ ರೆಡ್ಯೂಸ್ ರಿಯೂಸ್ ರಿಸೈಕಲ್ ಎನರ್ಜಿ ನೀತಿ ಅಗತ್ಯ: ಪ್ರಹ್ಲಾದ್ ಜೋಶಿ

Last Updated : Feb 5, 2023, 6:28 PM IST

ABOUT THE AUTHOR

...view details