ಹುಬ್ಬಳ್ಳಿ: ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಅವಳಿ ನಗರದ ವಿವಿಧ ಬಡಾವಣೆಗಳಲ್ಲಿ ಕ್ರಿಕೆಟ್ ಆಡುತ್ತಿದ್ದವರ ವಿರುದ್ಧ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ 46 ಮಂದಿ ವಿರುದ್ಧ ಐದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಲಾಕ್‌ಡೌನ್ ಇದ್ರೂ ಕ್ರಿಕೆಟ್ ಆಡಿದ 46 ಜನರ ವಿರುದ್ಧ ಬಿತ್ತು ಕೇಸ್ - ಲಾಕ್ ಡೌನ್ ಉಲ್ಲಂಘಿಸಿ ಕ್ರಿಕೆಟ್ ಆಡಿದ ಪ್ರಕರಣ 46 ಮಂದಿ ವಿರುದ್ಧ ಐದು ಪ್ರಕರಣ ದಾಖಲು
ಲಾಕ್‌ಡೌನ್ ಇದೆ, ನಮ್ಮನ್ನು ಯಾರೂ ಕೇಳುವವರು ಎಂದು ಬ್ಯಾಟ್ ಹಿಡಿದು ಓಡಾಡುವವರಿಗೆ ಪೊಲೀಸರು ಶಾಕ್ ನೀಡಿದ್ದಾರೆ. ಲಾಕ್‌ಡೌನ್ ನಿಯಮ ಎಲ್ಲರಿಗೂ ಒಂದೇ ಎಂಬುದನ್ನು ಅವಳಿ ನಗರ ಪೊಲೀಸರು ತೋರಿಸಿಕೊಟ್ಟಿದ್ದಾರೆ.
ಲಾಕ್ ಡೌನ್ ಇದ್ರು ಕ್ರಿಕೆಟ್ ಆಡಿದ ಹುಬ್ಬಳ್ಳಿ ಮಂದಿ
ಶಹರ ಪೊಲೀಸ್ ಠಾಣೆಯಲ್ಲಿ 10 ಮಂದಿ, ಕಸಬಾ ಪೊಲೀಸ್ ಠಾಣೆಯಲ್ಲಿ ಒಂಭತ್ತು ಮಂದಿ, ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಯಲ್ಲಿ ಐದು ಮಂದಿ, ಕೇಶ್ವಾಪುರ ಠಾಣೆಯಲ್ಲಿ ಆರು ಮಂದಿ ಹಾಗೂ ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ 16 ಮಂದಿ ವಿರುದ್ಧ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.