ಹುಬ್ಬಳ್ಳಿ :ಕಟ್ಟುನಿಟ್ಟಿನ ಲಾಕ್ಡೌನ್ ನಿಯಮ ಜಾರಿ ಹಿನ್ನೆಲೆ ಕಾರು ಚಾಲಕನೋರ್ವ ಮಾಸ್ಕ್ ಹಾಕದೇ ಬೇಕಾಬಿಟ್ಟಿಯಾಗಿ ವೇಗವಾಗಿ ಕಾರು ಚಲಾಯಿಸಿಕೊಂಡು ಹೋಗುತಿದ್ದ ವೇಳೆ ಪೊಲೀಸರು ಬೆನ್ನಟ್ಟಿ ಕಾರ್ ಸೀಜ್ ಮಾಡಿದ್ದಾರೆ.
ಕಾರು ಸೀಜ್ ಮಾಡಿದ ಹುಬ್ಬಳ್ಳಿ ಪೊಲೀಸರು ನಗರದ ಚೆನ್ನಮ್ಮ ಸರ್ಕಲ್ ಬಳಿ ಈ ಘಟನೆ ನಡೆದಿದ್ದು, ಮಾಸ್ಕ್ ಧರಿಸದೇ ದಾಖಲೆಗಳಿಲ್ಲದೇ ಚಾಲಕನೋರ್ವ ಧಾರವಾಡದಿಂದ ಹುಬ್ಬಳ್ಳಿ ಕಡೆ ಬರುತ್ತಿದ್ದ. ಈ ವೇಳೆ ಚೆನ್ನಮ್ಮ ಸರ್ಕಲ್ ಬಳಿಯ ಚೆಕ್ಪೋಸ್ಟ್ನಲ್ಲಿ ಪೊಲೀಸರನ್ನ ನೋಡಿದ ಕೂಡಲೇ ವೇಗವಾಗಿ ಕಾರು ಚಾಲನೆ ಮಾಡಿಕೊಂಡು ಹೋಗಿದ್ದ.
ಭದ್ರತೆಯಲ್ಲಿದ್ದ ಪೊಲೀಸರು ತಕ್ಷಣವೇ ಕಾರನ್ನು ಹಳೆ ಕೋರ್ಟ್ ತನಕ ಬೆನ್ನಟ್ಟಿಕೊಂಡು ಹೋಗಿ ವಶಕ್ಕೆ ಪಡೆದರು. ಪೊಲೀಸರ ಜೊತೆಗೆ ಅನಗ್ಯತ ವಾಗ್ವಾದ ನಡೆಸಿದ್ದರಿಂದ 2 ಗಂಟೆ ಕಾಲ ಕಾರು ವಶಕ್ಕೆ ಪಡೆದು ದಂಡ ಕಟ್ಟಿ ಹೋಗಲು ತಿಳಿಸಿದರು.
ಆದರೆ, ಚಾಲಕ ದಂಡ ಕಟ್ಟಲು ನಿರಾಕರಿಸಿ ಪೊಲೀಸರು ಕೈಮುಗಿದು ಕಾರನ್ನು ಬಿಟ್ಟು ಬಿಡಲು ಮನವಿ ಮಾಡಿದ್ದಾನೆ. ಆದರೆ, ಪೊಲೀಸರು ಕಾರ್ ಸೀಜ್ ಮಾಡಿ ಉಪನಗರ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ.
ಓದಿ:ಅಪಘಾತದಲ್ಲಿ ಗಾಯಗೊಂಡಿದ್ದ ವಿಶೇಷ ಚೇತನ : ಆಸ್ಪತ್ರೆಗೆ ಸೇರಿಸಿ ಸಂಸದ ಡಿ ಕೆ ಸುರೇಶ್ ಮಾನವೀಯತೆ