ಹುಬ್ಬಳ್ಳಿ: ಬೈಕ್ ಹಾಗೂ ಕಾರು ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಪಾಳೆ ಗ್ರಾಮದ ಕ್ರಾಸ್ ಬಳಿ ನಡೆದಿದೆ.
ಬೈಕ್- ಕಾರು ಅಪಘಾತ: ಒರ್ವ ಸಾವು - ಹುಬ್ಬಳ್ಳಿ ಹಾವೇರಿ ರಸ್ತೆಯಲ್ಲಿ ಕಾರು ಅಪಘಾತ ಸುದ್ದಿ
ಹುಬ್ಬಳ್ಳಿಯಿಂದ ಹಾವೇರಿ ಕಡೆಗೆ ಹೋಗುತ್ತಿದ್ದ ಕಾರು ಪಾಳೆ ಗ್ರಾಮದ ಕ್ರಾಸ್ ನ ತಿರುವಿನಲ್ಲಿ ಬೈಕ್ ಗೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.
![ಬೈಕ್- ಕಾರು ಅಪಘಾತ: ಒರ್ವ ಸಾವು](https://etvbharatimages.akamaized.net/etvbharat/prod-images/768-512-5109657-thumbnail-3x2-accident.jpg)
ಬೈಕ್ ಕಾರು ಅಪಘಾತ ಒರ್ವ ಸಾವು
ಪಾಳೆ ಗ್ರಾಮದ ಶಂಕರಪ್ಪ ಮಹಾದೇವಪ್ಪ ಜೋಗನ್ನವರ (27) ಮೃತ ವ್ಯಕ್ತಿ. ಶೆರೆವಾಡ ಗ್ರಾಮದ ಉಳವಪ್ಪ ಶೇಖಪ್ಪ ಬ್ಯಾಹಟ್ಟಿ (30) ಗಂಭೀರವಾಗಿ ಗಾಯಗೊಂಡಿದ್ದು ಈತನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನಗರದಿಂದ ಹಾವೇರಿ ಕಡೆಗೆ ಹೋಗುತ್ತಿದ್ದ ಕಾರು ಪಾಳೆ ಕ್ರಾಸ್ ನ ತಿರುವಿನಲ್ಲಿ ಬೈಕ್ ಗೆ ಡಿಕ್ಕಿಯಾದ ಪರಿಣಾಮ ಬೈಕ್ ಚಲಾಯಿಸುತ್ತಿದ್ದ ಶಂಕರಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನೂ ಹಿಂಬದಿಯ ಸವಾರನಿಗೆ ಗಂಭೀರವಾಗಿ ಗಾಯಗಳಾಗಿವೆ. ಕಾರು ಚಾಲಕ ಮದ್ದೂರಿನವನೆಂದು ಪೊಲೀಸರು ತಿಳಿಸಿದ್ದು, ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.