ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಕ್ಯಾನ್ಸರ್​​ ಕುರಿತು ಜಾಗೃತಿ ಕಾರ್ಯಕ್ರಮ - ಎಚ್​ಸಿಜಿಎನ್ಎಂಆರ್ ಕ್ಯಾನ್ಸರ್ ಸೆಂಟರ್

ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಹೆಚ್​ಸಿಜಿಎನ್ಎಂಆರ್ ಕ್ಯಾನ್ಸರ್ ಸೆಂಟರ್ ವತಿಯಿಂದ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ
ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ

By

Published : Feb 4, 2020, 7:39 AM IST

ಹುಬ್ಬಳ್ಳಿ:ನಗರದ ರೈಲ್ವೆ ನಿಲ್ದಾಣದಲ್ಲಿ ಹೆಚ್​ಸಿಜಿಎನ್ಎಂಆರ್ ಕ್ಯಾನ್ಸರ್ ಸೆಂಟರ್ ವತಿಯಿಂದ ಆಯೋಜಿಸಲಾಗಿದ್ದ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮಕ್ಕೆ ಎಸ್​​ಡಬ್ಲ್ಯೂಆರ್ ವ್ಯವಸ್ಥಾಪಕ ನಿರ್ದೇಶಕ ಅಜಯಕುಮಾರ್ ಸಿಂಗ್ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ಯಾನ್ಸರ್ ರೋಗ ಮಾರಕವಾಗಿದೆ. ಇದರ ವಿರುದ್ಧದ ಹೋರಾಟಕ್ಕೆ ನೈಋತ್ಯ ರೈಲ್ವೆ ವಲಯ ಕೂಡಾ ಕೈ ಜೋಡಿಸಲಿದೆ. ಕ್ಯಾನ್ಸರ್​​ ವಿಷಯಕ್ಕೆ ಬಂದರೆ ಮಾದಕ ವಸ್ತುಗಳ ವ್ಯಸನದಿಂದಲೇ ಇದು ಹೆಚ್ಚಾಗಿ ಬರುತ್ತದೆ. ಮಾದಕ ವಸ್ತುಗಳ ವ್ಯಸನ ಆರೋಗ್ಯಕ್ಕೆ ಮಾತ್ರವಲ್ಲದೆ ಕುಟುಂಬಕ್ಕೆ ಮಾರಕವಾಗಿದೆ. ಕ್ಷಣಿಕ ಸುಖದ ಹಿಂದೆ ಅಮೂಲ್ಯವಾದ ಜೀವನವನ್ನು ವ್ಯರ್ಥ ಮಾಡಿಕೊಳ್ಳದಿರಿ ಎಂದು ಸಲಹೆ ನೀಡಿದರು.

ಹೆಚ್​ಸಿಜಿಎನ್ಎಂಆರ್ ಕ್ಯಾನ್ಸರ್ ಸೆಂಟರ್ ವತಿಯಿಂದ ಕಾರ್ಯಕ್ರಮ

ದೇಶದಲ್ಲಿ ಪ್ರತಿ ವರ್ಷ 18 ಲಕ್ಷ ಜನ ಕ್ಯಾನ್ಸರ್​​ಗೆ ತುತ್ತಾಗುತ್ತಿದ್ದಾರೆ. ಪ್ರತಿ ನಿಮಿಷಕ್ಕೆ ಇಬ್ಬರು ಸಾವನ್ನಪ್ಪುತ್ತಿದ್ದಾರೆ. ಈ ಮಾರಕ ಕಾಯಿಲೆ ತಡೆಯಲು ಜಾಗೃತಿ ಅಗತ್ಯವಾಗಿದೆ. ಈ ಹಿನ್ನೆಲೆ ಮೊದಲ ಬಾರಿಗೆ ವಿಶೇಷ ರೀತಿಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಕ್ಯಾನ್ಸರ್ ಸೆಂಟರ್ ಮುಖ್ಯಸ್ಥರು ತಿಳಿಸಿದರು.

ABOUT THE AUTHOR

...view details