ಧಾರವಾಡ: ವಿದ್ಯಾಕಾಶಿ ಎಂದು ಖ್ಯಾತಿ ಹೊಂದಿರುವ ಧಾರವಾಡ ಜಿಲ್ಲೆಯಲ್ಲಿ ಇದೀಗ ಕೆಲವು ಶಾಲೆಗಳನ್ನು ಮುಚ್ಚುವ ಆತಂಕ ಎದುರಾಗಿದೆ. ಹಾಜರಾತಿ ಪ್ರಮಾಣ ಹಾಗೂ ಮೂಲಸೌಕರ್ಯ ಗಮನಿಸಿ ಖಾಸಗಿ ಶಾಲೆಗಳ ಮಾನ್ಯತೆ ರದ್ದು ಮಾಡಲಾಗುತ್ತಿದೆ.
ಮೊದಲೇ ಕೊರೊನಾದಿಂದ ಸಮಸ್ಯೆ ಎದುರಿಸುತ್ತಿರುವ ಖಾಸಗಿ ಶಾಲೆಗಳು, ಇದೀಗ ಮತ್ತೊಂದು ಸಂಕಷ್ಟ ಎದುರಿಸುವಂತಾಗಿದೆ. ಅನೇಕ ಖಾಸಗಿ ಹಾಗೂ ಅನುದಾನಿತ ಶಾಲೆಗಳ ಮೇಲೆ ಅನುಮತಿ ರದ್ದಾಗುವ ತೂಗುಗತ್ತಿ ನೇತಾಡುತ್ತಿದೆ. ಈಗಾಗಲೇ ಇಂತಹ ಶಾಲೆಗಳಿಗೆ ನೋಟಿಸ್ ನೀಡಲಾಗಿದೆ.
ಮಾನ್ಯತೆ ರದ್ದಾಗುವ ಭೀತಿಯಲ್ಲಿ ಅನುದಾನಿತ ಶಾಲೆಗಳು ಸರ್ಕಾರದ ನಿಯಮಾವಳಿಗಳ ಪ್ರಕಾರ, ಹಾಜರಾತಿ ನಿರ್ವಹಣೆ ಆಗದೇ ಹೋದಲ್ಲಿ ಅಂತಹ ಶಾಲೆಗಳ ಅನುಮತಿ ರದ್ದು ಮಾಡುವ ಅಧಿಕಾರ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಇರುತ್ತದೆ.
ಸದ್ಯ ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಬಳಿಕ ಸಾಕಷ್ಟು ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆ ಬಿಡಿಸಿ, ಸರ್ಕಾರಿ ಶಾಲೆಗಳಿಗೆ ಸೇರಿಸುತ್ತಿದ್ದು, ಇದರ ಪರಿಣಾಮದಿಂದಾಗಿ 36 ಖಾಸಗಿ ಮತ್ತು ಅನುದಾನಿತ ಶಾಲೆಗಳಲ್ಲಿ ಹಾಜರಾತಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇಂತಹ ಶಾಲೆಗಳಿಗೆ ಇದೀಗ ಧಾರವಾಡ ಡಿಡಿಪಿಐ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.
ನಿಯಮಾವಳಿ ಪ್ರಕಾರ ಪ್ರತಿ ತರಗತಿಯಲ್ಲಿ ಕನಿಷ್ಠ 30 ಹಾಜರಾತಿ ಇರಲೇಬೇಕು. ಕಳೆದ ಎರಡು ವರ್ಷಗಲ್ಲಿ ಅನೇಕ ಮಕ್ಕಳು ಖಾಸಗಿ ಮತ್ತು ಅನುದಾನಿತ ಶಾಲೆಗಳನ್ನು ಬಿಟ್ಟು ಸರ್ಕಾರಿ ಶಾಲೆಗಳಿಗೆ ಸೇರಿದ್ದರಿಂದ ಜಿಲ್ಲೆಯಲ್ಲಿನ ಸರ್ಕಾರಿ ಶಾಲೆಗಳಲ್ಲಿ ಅಂದಾಜು 25%ರಷ್ಟು ಹಾಜರಾತಿ ಹೆಚ್ಚಾಗಿದೆ. ಖಾಸಗಿ ಶಾಲೆಗಳಲ್ಲಿ ಹಾಜರಾತಿ ಕ್ಷೀಣಿಸಿದ್ದರಿಂದ ಅಂತಹ ಎಲ್ಲಾ ಶಾಲೆಗಳಿಗೂ ನೋಟಿಸ್ ಜಾರಿ ಮಾಡಲಾಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ