ಕರ್ನಾಟಕ

karnataka

ETV Bharat / state

ಪ್ರಭಾವಿಗಳ ಪಾಲಾಗುತ್ತಿವೆ ಅವಳಿ ನಗರದ ರಾಜಕಾಲುವೆಗಳು: ಕಣ್ಮುಚ್ಚಿ ಕುಳಿತ ಜಿಲ್ಲಾಡಳಿತ!? - canal encroachment increased in hubballi -dharwada

ಕಳೆದ ವರ್ಷ ಸುರಿದ ಮಳೆಯಿಂದಾಗಿ ಹುಬ್ಬಳ್ಳಿಯ ಜನರು ತತ್ತರಿಸಿ ಹೋಗಿದ್ರು. ರಾಜಕಾಲುವೆಯಲ್ಲಿ ಹರಿಯಬೇಕಿದ್ದ ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಮನೆ ಮಂದಿಯೆಲ್ಲಾ ಬೀದಿಗೆ ಬಿದ್ದಿದ್ದರು. ಇಷ್ಟಕ್ಕೆಲ್ಲಾ ಕಾರಣ ರಾಜಕಾಲುವೆ ಒತ್ತುವರಿ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

canal encroachment increased in hubballi
ಪ್ರಭಾವಿಗಳ ಪಾಲಾಗುತ್ತಿವೆ ಅವಳಿ ನಗರದ ರಾಜಕಾಲುವೆಗಳು

By

Published : Apr 15, 2021, 4:32 PM IST

ಹುಬ್ಬಳ್ಳಿ: ಅವಳಿ ನಗರ ಹುಬ್ಬಳ್ಳಿ - ಧಾರವಾಡದಲ್ಲಿ ಸರ್ಕಾರಿ ಜಾಗ, ಮೈದಾನ ಹಾಗೂ ರಾಜಕಾಲುವೆ ಒತ್ತುವರಿ ಎಗ್ಗಿಲ್ಲದೆ ನಡೆಯುತ್ತಿದೆ. ಇದೆಲ್ಲವು ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಗಮನಕ್ಕೆ ಬಂದಿದ್ದರೂ ತಡೆಯುವ ಪ್ರಯತ್ನವಾಗುತ್ತಿಲ್ಲ ಎಂಬ ದೂರು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಕಳೆದ ವರ್ಷ ಸುರಿದ ಮಳೆಯಿಂದಾಗಿ ಹುಬ್ಬಳ್ಳಿಯ ಜನರು ತತ್ತರಿಸಿ ಹೋಗಿದ್ರು. ರಾಜಕಾಲುವೆಯಲ್ಲಿ ಹರಿಯಬೇಕಿದ್ದ ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಮನೆ ಮಂದಿಯೆಲ್ಲಾ ಬೀದಿಗೆ ಬಿದ್ದಿದ್ದರು. ಇಷ್ಟಕ್ಕೆಲ್ಲ ಕಾರಣ ರಾಜಕಾಲುವೆ ಒತ್ತುವರಿ ಎಂಬ ಆರೋಪ ಕೇಳಿಬಂದಿದೆ.

ರಾಜಕಾಲುವೆ ಒತ್ತುವರಿ ಕುರಿತು ಜಿಲ್ಲಾಧಿಕಾರಿ ಪ್ರತಿಕ್ರಿಯೆ

ಅವಳಿ ನಗರದಲ್ಲಿ ಸುಮಾರು 35 ಕಿಲೋ ಮೀಟರ್​ನಷ್ಟು ರಾಜಕಾಲುವೆಯಿದೆ. ಈ ಕಾಲುವೆ ಒತ್ತುವರಿ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದ್ದಂತೆ 8 ತಿಂಗಳ ಹಿಂದೆ ಉಣಕಲ್​ನಿಂದ ಗಬ್ಬೂರವರೆಗಿನ 8.5 ಕಿಲೋ ಮೀಟರ್ ಸರ್ವೆ ಮಾಡಲಾಗಿತ್ತು. ಸರ್ವೆಯಲ್ಲಿ 153 ಕಡೆಗಳಲ್ಲಿ ಒತ್ತುವರಿಯಾಗಿರುವ ಅಂಶ ಬೆಳಕಿಗೆ ಬಂದಿತ್ತು. ಭೂಮಾಪನ ಇಲಾಖೆ ಸಿಬ್ಬಂದಿ ಒಂದೂವರೆ ತಿಂಗಳ ಕಾಲ ಸರ್ವೆ ನಡೆಸಿ ಚನ್ನಪೇಟೆ, ದೋಬಿಘಾಟ್, ಪಾಂಡುರಂಗ ನಗರದಲ್ಲಿ ಶೇಕಡಾ 80ರಷ್ಟು ಕಾಲುವೆ ಒತ್ತುವರಿಯಾಗಿದೆ ಎಂದು ವರದಿ ಸಲ್ಲಿಸಿದ್ರು. ಆದರೆ ಇದುವರೆಗು ಕಾಲುವೆ ತೆರವು ಕಾರ್ಯಾಚರಣೆ ಸಾಧ್ಯವಾಗಿಲ್ಲ. ಪಾಲಿಕೆ ವರದಿ ತಯಾರು ಮಾಡಿದೆ. ಆದರೆ ಇದುವರೆಗೂ ಜಿಲ್ಲಾಧಿಕಾರಿಯ ಗಮನಕ್ಕೆ ಬಂದಿಲ್ಲವಂತೆ. ಈ ಬಗ್ಗೆ ಕೇಳಿದ್ರೆ, ವರದಿ ತರಿಸಿಕೊಂಡು ಕ್ರಮ ಕೈಗೊಳ್ಳುತ್ತೇನೆ ಎನ್ನುತ್ತಾರೆ.

ಕಾಲುವೆ ಒತ್ತುವರಿ ಮಾಡಿಕೊಂಡು ಕೆಲವರು ಮೂರು ನಾಲ್ಕು ಅಂತಸ್ತಿನ ಮನೆಗಳನ್ನ ಕಟ್ಟಿಕೊಂಡಿದ್ರೆ, ಇನ್ನೂ ಕೆಲವರು ವಾಣಿಜ್ಯ ಮಳಿಗೆ ಕಟ್ಟಿದ್ದಾರೆ. ಶೆಟ್ಟರ್ ಕಾಲೋನಿ, ದೇವಿನಗರ, ಅರ್ಜುನ ನಗರ, ಹನುಮಂತ ನಗರ, ಸಿದ್ದಲಿಂಗೇಶ್ವರ ಕಾಲೋನಿ, ಎಸ್.ಎಂ.ಕೃಷ್ಣ ನಗರದಲ್ಲಿ ಒತ್ತುವರಿ ಮಾಡಿಕೊಂಡು ಮನೆ ಕಟ್ಟಲಾಗಿದೆ. ದುರಂತ ಅಂದ್ರೆ ಈ ಪ್ರದೇಶದಲ್ಲಿ ಪಾಲಿಕೆಯಿಂದಲೇ ಭೂ ಬಾಡಿಗೆ ನೀಡಲಾಗಿದೆ. ಆದರೆ, 2012ರಿಂದ ಭೂ ಬಾಡಿಗೆ ನೀಡುವುದನ್ನ ಸ್ಥಗಿತಗೊಳಿಸಿದ್ದಾರೆ. ಆದರೆ, ಅಲ್ಲಿಯ ನಿವಾಸಿಗಳು ಈಗಲು ಮನೆ ಕರ, ನೀರಿನ ಕರ ಕಟ್ಟುತ್ತಿದ್ದಾರೆ. ಇನ್ನೂ ಹಲವರಿಗೆ ಕೊಳಚೆ ನಿರ್ಮೂಲನ ಮಂಡಳಿಯಿಂದ ಹಕ್ಕುಪತ್ರ ನೀಡಲಾಗಿದೆ. ಇದೆಕ್ಕೆಲ್ಲ ಪ್ರಭಾವಿಗಳೇ ಕಾರಣರಾಗಿದ್ದಾರೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಹುಬ್ಬಳ್ಳಿಯಲ್ಲಿ ರಾಜಕಾಲುವೆ ಒತ್ತುವರಿಯಾಗಿರುವ ವರದಿ ಸಿದ್ಧವಾಗಿದೆ. ಆದರೆ ಪಾಲಿಕೆ ಮಾಡಿಕೊಂಡಿರುವ ಎಡವಟ್ಟಿನಿಂದ ಒತ್ತುವರಿ ತೆರವುಗೊಳಿಸುವುದು ಸವಾಲಿನ ಕೆಲಸವಾಗಿದ್ರೆ, ಮಳೆಗಾಲದಲ್ಲಿ ಮತ್ತೆ ಎಲ್ಲಿ ಮನೆಗಳಿಗೆ ನೀರು ನುಗ್ಗುತ್ತೋ ಎನ್ನುವ ಆತಂಕ ಜನರದ್ದು. ಅದೇನೇ ಇರಲಿ ಬಡ ಜನರ ಗುಡಂಗಡಿಗಳಿಗೆ ಜೆಸಿಬಿ ನುಗ್ಗಿಸಿ ನೆಲಸಮ ಮಾಡಿರೋ ಅಧಿಕಾರಿಗಳು ಪ್ರಭಾವಿಗಳ ಒತ್ತಡಕ್ಕೆ ಮಣಿಯುತ್ತಿದ್ದಾರೆ ಅನ್ನೋ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ಓದಿ:ಏ ಸಿದ್ದರಾಮಯ್ಯ ನಿಂಗ್​ ಬುದ್ದಿ ಇಲ್ವೇನಲೇ ಅಂತಾ ಕೇಳಕ್ಕೆ ನಂಗೆ ಬರೋದಿಲ್ವಾ: ಸಚಿವ ಈಶ್ವರಪ್ಪ

ABOUT THE AUTHOR

...view details