ಕರ್ನಾಟಕ

karnataka

ETV Bharat / state

ಸಿಎಎ ವಿರುದ್ಧ ಹುಬ್ಬಳ್ಳಿಯಲ್ಲಿ ಶಾಂತಿಯುತ ಪ್ರತಿಭಟನೆ: ಖಾಕಿ ಪಡೆಗೆ ಹೂ ನೀಡಿದ ಪ್ರತಿಭಟನಾಕಾರರು - protesters gave flowers to police personals

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆದಿದ್ದು, ಶಾಂತಿಯುತ ಪ್ರತಿಭಟನೆ ಭದ್ರತೆ ಒದಗಿಸಿದ ಪೊಲೀಸರಿಗೆ ಪ್ರತಿಭಟನಾಕಾರರು ಹೂ ನೀಡಿ ವಂದಿಸಿದ್ರು.

protest
ಪೊಲೀಸರಿಗೆ ಹೂ ನೀಡಿದ ಪ್ರತಿಭಟನಾಕಾರರು

By

Published : Dec 24, 2019, 5:01 PM IST

ಹುಬ್ಬಳ್ಳಿ:ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೃಹತ್ ಅಂಜುಮನ್ ಇಸ್ಲಾಂ ಸಂಘಟನೆ, ವಿವಿಧ ದಲಿತ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳು ನಗರದಲ್ಲಿಂದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ನಗರದ ನೆಹರೂ ಮೈದಾನದಲ್ಲಿ ಶಾಂತಿ ಸಭೆ ನಡೆಸಿದರು.

ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಜನ ಪ್ರತಿಭಟನಾಕಾರರು ಜಮಾವಣೆಗೊಂಡಿದ್ದರು. ಪ್ರತಿಭಟನಾ ಮೆರವಣಿಗೆ ಹಾಗೂ ಶಾಂತಿ ಸಭೆಯ ಬಿಗಿ ಭದ್ರತೆಗೆ ಹೆಚ್ಚಿನ ಪೊಲೀಸ್ ನಿಯೋಜನೆ ಮಾಡಲಾಗಿತ್ತು. ಆದರೆ, ಪ್ರತಿಭಟನೆ ಹಾಗೂ‌ ಮೆರವಣಿಗೆಯಲ್ಲಿ ಯಾವುದೇ ಗದ್ದಲ ಇಲ್ಲದೇ ಶಾಂತ ರೀತಿಯಲ್ಲಿ ನಿರ್ವಹಿಸಿ ಕೊಟ್ಟಿದ್ದಕ್ಕೆ ಪೊಲೀಸರಿಗೆ ಪ್ರತಿಭಟನಾಕಾರರು ಹೂ ನೀಡಿ ನೀಡಿ ಗೌರವ ವಂದನೆ ಸಲ್ಲಿಸಿದ್ರು.

ಪೊಲೀಸರಿಗೆ ಹೂ ನೀಡಿದ ಪ್ರತಿಭಟನಾಕಾರರು

ಪೊಲೀಸರು ರಾತ್ರಿ ಹಗಲು ಎನ್ನದೇ ಯಾವುದೇ ತೊಂದರೆಗಳು ಆಗಬಾರದೆಂಬ ಹಿನ್ನೆಲೆಯಲ್ಲಿ ಭದ್ರತೆ ಒದಗಿಸಿದ್ದಾರೆ. ಪೊಲೀಸ್ ಕಾರ್ಯ ಮೆಚ್ಚುವಂತದ್ದಾಗಿದೆ. ಹೀಗಾಗಿ ವಾಣಿಜ್ಯ ನಗರಿಯಲ್ಲಿ ಶಾಂತಿ ನೆಲೆಸಲು ಪೊಲೀಸರ ಪಾತ್ರ ದೊಡ್ಡದು‌ ಎಂದು ಪೊಲೀಸರ ಕಾರ್ಯವನ್ನು ಶ್ಲಾಘಿಸಿದ ಪ್ರತಿಭಟನಾಕಾರು ಅವರಿಗೆ ಗುಲಾಬಿ ಹೂ ಕೊಟ್ಟು ಧನ್ಯವಾದಗಳನ್ನು ತಿಳಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details