ಕರ್ನಾಟಕ

karnataka

ETV Bharat / state

ನಾಳೆಯಿಂದ ಸಿಎಂ ಸರಿಯಾಗಿ ಕೆಲಸ ಮಾಡ್ತಾರೆ: ಹೊರಟ್ಟಿ

ಮುಖ್ಯಮಂತ್ರಿ ಆರೋಗ್ಯ ಸರಿಯಿದ್ದಿಲ್ಲ. ನಾಳೆಯಿಂದ ಸರ್ಕಾರ ಮತ್ತು ಮುಖ್ಯಮಂತ್ರಿಗಳು ಸರಿಯಾಗಿ ಕೆಲಸ ಮಾಡುತ್ತಾರೆ ಎಂದ ಹೊರಟ್ಟಿ.

ಮಾಜಿ‌ ಸಭಾಪತಿ‌ ಬಸವರಾಜ್ ಹೊರಟ್ಟಿ‌

By

Published : May 4, 2019, 8:06 PM IST

ಧಾರವಾಡ: ಮುಖ್ಯಮಂತ್ರಿ ಅವರ ಆರೋಗ್ಯ ಸರಿಯಿಲ್ಲದ ಕಾರಣ ಉಡುಪಿಗೆ ಹೋಗಿದ್ದಾರೆ. ನಾಳೆಯಿಂದ ಬಂದು ಎಲ್ಲವನ್ನು ಸರಿಪಡಿಸುವ ಕೆಲಸ ಮಾಡುತ್ತಾರೆ.‌ ನೀತಿ ಸಂಹಿತೆ ಇರುವ ಕಾರಣ ನಿರ್ಧಾರ ಕೈಗೊಳ್ಳುವುದು ಸಾಧ್ಯವಾಗುವುದಿಲ್ಲ. ನಾಳೆಯಿಂದ ಸರ್ಕಾರ ಮತ್ತು ಮುಖ್ಯಮಂತ್ರಿಗಳು ಸರಿಯಾಗಿ ಕೆಲಸ ಮಾಡುತ್ತಾರೆ ಎಂದು ‌ಬಸವರಾಜ್ ಹೊರಟ್ಟಿ‌ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ‌ ಅವರು, ಮೇ 23ರ ನಂತರ ಸರ್ಕಾರ ಪತನದ ವಿಚಾರಕ್ಕೆ ಪ್ರತಿಕ್ರಿಯಿಸಿ, ಅನಂತಕುಮಾರ ಹೆಗಡೆ ಭವಿಷ್ಯ ಯಾವಾಗ ಹೇಳತಾರೋ ನನಗೆ ಗೊತ್ತಿಲ್ಲ. ಅವರು ಎಲ್ಲರಿಗೂ ಭವಿಷ್ಯ ಹೇಳಿ ಕಳಿಸ್ತಾರೆ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ಮತ್ತು ಜಿ.ಟಿ.ದೇವೆಗೌಡರು ಮಾತನಾಡಿದ ಮಾತು ಅವಶ್ಯಕತೆ ಇರಲಿಲ್ಲ. ಅದನ್ನ ಯಾಕೆ ಮಾತನಾಡಬೇಕು. ನಾನು ಸಿದ್ದರಾಮಯ್ಯ, ಡಿಕೆಶಿ ಮತ್ತು ಗುಂಡೂರಾವ್ ಸೇರಿ ಮೀಟಿಂಗ್​ ಮಾಡಿದ್ದೇವೆ. ಇನ್ನು ಮುಂದೆ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಸುಭದ್ರವಾಗಿ ಸರ್ಕಾರ ನಡೆಸುವ ಬಗ್ಗೆ ಚರ್ಚೆ ಮಾಡಿದ್ದೇವೆ. ಸರ್ಕಾರಕ್ಕೆ ತೊಂದರೆಯಿಲ್ಲ ಎಂದರು.

ಮೇ 23ರ ನಂತರ ಏನಾಗತ್ತೋ ಗೊತ್ತಿಲ್ಲ. ಕೋಮುವಾದಿ ಪಕ್ಷ ಅಧಿಕಾರಕ್ಕೆ ಬರಬಾರದು ಎನ್ನುವ ಕಾರಣಕ್ಕೆ ಕಾಂಗ್ರೆಸ್​ನವರು ಜೆಡಿಎಸ್​​​ಗೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಟ್ಟಿದ್ದಾರೆ. ಈಗೇನಾದ್ರು 23ರ ನಂತರ ಸರ್ಕಾರ ಬಿದ್ದರೆ ನಗೆಪಾಟಲಿಗೆ ಈಡಾಗ್ತಾರೆ. ಆದ್ದರಿಂದ ಮೈತ್ರಿ ಧರ್ಮ ಪಾಲನೆ ಮಾಡಬೇಕು. ಎರಡು ಪಕ್ಷಗಳು ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದರು.

ಮಾಜಿ‌ ಸಭಾಪತಿ‌ ಬಸವರಾಜ್ ಹೊರಟ್ಟಿ‌

ಕಾಂಗ್ರೆಸ್​ನ ಕೆಲವು ನಾಯಕರು ಮನಸ್ಸಿಗೆ ಬಂದತೆ ಹೇಳಿಕೆ ಕೊಡ್ತಾರೆ. ಮೊದಲು ಇವರು ಬಾಯಿಗೆ ಬೀಗ ಹಾಕಿಕೊಳ್ಳಬೇಕು. ಏನಾದ್ರು ಹೇಳುವದಿದ್ರೆ ಸಿಎಂ ಇಲ್ಲವೆ ಡಿಸಿಎಂಗೆ ಹೇಳಬೇಕು ಮತ್ತು ಸಮನ್ವಯ ಸಮಿತಿಯ ಅಧ್ಯಕ್ಷರಿಗೆ ಹೇಳಬೇಕು. ತಲೆಗೊಬ್ಬರು ಮಾತನಾಡುವುದು ಸರಿಯಲ್ಲ. ಇನ್ನು ಮುಂದಾದ್ರು ಒಳ್ಳೆಯ ರೀತಿಯಿಂದ ಸರ್ಕಾರ ನಡೆಸುವಂತೆ ಇಬ್ಬರಿಗೂ ಹೇಳಿದ್ದೇವೆ. ಈಗಲೂ ಹೆಳ್ತೀವಿ ಎಂದರು.

ಶಿಕ್ಷಣದ ವಿಚಾರವಾಗಿ ಏನಾದ್ರು ಹೇಳಿದ್ರೆ, ನಾನು ಮಂತ್ರಿ ಆಗಿಲ್ಲ ಎಂದು ತಿಳಿದುಕೊಳ್ತಾರೆ. ಇದು ನನಗೆ ಅಲರ್ಜಿ. ಎಲ್ಲಾ ಇಲಾಖೆಗಳಿಗಿಂತ ಒಳ್ಳೆಯ ಕೆಲಸ ಮಾಡಬೇಕಾದುದು ಶಿಕ್ಷಣ ಮಂತ್ರಿ‌. ನನಗೆ ಶಿಕ್ಷಣ ಮಂತ್ರಿ ಮಾಡಬೇಕಿತ್ತು. ಆದ್ರೆ ಮಾಡಿಲ್ಲ. ನನಗೆ ಮಂತ್ರಿ ಮಾಡಿದ್ದರೆ ನಾನು ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳುತ್ತಿದ್ದೆ ಎಂದು ಸಚಿವ ಸ್ಥಾನ‌ ನೀಡದ್ದಕ್ಕೆ ಬೇಸರ ವ್ಯಕ್ತಪಡಿಸಿದರು.

ನನಗೆ ಶಿಕ್ಷಣ ಇಲಾಖೆ ಜೊತೆ ಭಾವನಾತ್ಮಕ ಸಂಬಂದ ಇದೆ. ನಾನು ಯಾವ ಮಂತ್ರಿಗಿಂತಲೂ ಕಡಿಮೆ ಇಲ್ಲ. ನಾನು ಮುಖ್ಯ ಕಾರ್ಯದರ್ಶಿ ಜೊತೆ ಮಾತನಾಡಿದ್ದೇನೆ. ನನ್ನ ಅನಿಸಿಕೆ ಪ್ರಕಾರ ಶಿಕ್ಷಣ ಮಂತ್ರಿ ಹುದ್ದೆ ಖಾಲಿ ಇರಬಾರದಿತ್ತು ಎಂದು ‌ಅಸಮಾಧಾನ ಹೊರಹಾಕಿದರು.

ABOUT THE AUTHOR

...view details