ಕರ್ನಾಟಕ

karnataka

ETV Bharat / state

ಸಾರಿಗೆ ಸಂಸ್ಥೆ ಬಸ್​ ಡಿಕ್ಕಿ.. ಪಾದಚಾರಿ ಸ್ಥಳದಲ್ಲೇ ಸಾವು - Latest Acccident News In Darwad

ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬ ಸ್ಥಳದಲ್ಲಿ ಮೃತಪಟ್ಟ ಘಟನೆ ಧಾರವಾಡದ ರಾಷ್ಟ್ರೀಯ ಹೆದ್ದಾರಿ 4ರ ಇಟ್ಟಿಗಟ್ಟಿ ಕ್ರಾಸ್ ಬಳಿ ನಡೆದಿದೆ.

ಪಾದಚಾರಿಗೆ ಬಸ್​ ಡಿಕ್ಕಿ : ಸ್ಥಳದಲ್ಲೇ ಸಾವು
ಪಾದಚಾರಿಗೆ ಬಸ್​ ಡಿಕ್ಕಿ : ಸ್ಥಳದಲ್ಲೇ ಸಾವು

By

Published : Dec 10, 2019, 10:04 PM IST

ಧಾರವಾಡ: ಪಾದಚಾರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಡಿಕ್ಕಿ ಹೊಡೆದ ಪರಿಣಾಮವಾಗಿ ಪಾದಚಾರಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಧಾರವಾಡದ ರಾಷ್ಟ್ರೀಯ ಹೆದ್ದಾರಿ 4ರ ಇಟ್ಟಿಗಟ್ಟಿ ಕ್ರಾಸ್ ಬಳಿ ನಡೆದಿದೆ.

ಬೆಳಗಾವಿಯಿಂದ ಹಾಸನಕ್ಕೆ ಹೊರಟಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ರಭಸವಾಗಿ ಹೊರಟಿತ್ತು ಎನ್ನಲಾಗಿದೆ. ಬಸ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ತಲೆ ನಜ್ಜುಗುಜ್ಜಾಗಿದೆ.ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details