ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ-ಧಾರವಾಡ ಮಂದಿಗೆ ಇನ್ನು ಪ್ರತಿ 3 ನಿಮಿಷಕ್ಕೊಂದು ಬಸ್​ - undefined

ಹುಬ್ಬಳ್ಳಿ-ಧಾರವಾಡ ನಡುವೆ ಜನದಟ್ಟಣೆಯ ಅವಧಿಯಲ್ಲಿ ಇನ್ನು ಪ್ರತಿ 3 ನಿಮಿಷಗಳ ಅಂತರದಲ್ಲಿ ಬಸ್‍ಗಳು ಸಂಚಾರ ಕೈಗೊಳ್ಳಲಿವೆ ಎಂದು ವಾ.ಕ.ರ.ಸಾ.ಸಂಸ್ಥೆ ಹಾಗೂ ಹು-ಧಾ ಬಿ ಆರ್ ಟಿ ಎಸ್ ವ್ಯವಸ್ಥಾಪಕ ನಿದೇಶಕ ರಾಜೇಂದ್ರ ಚೋಳನ್ ತಿಳಿಸಿದ್ದಾರೆ.

ಪ್ರತಿ 3 ನಿಮಿಷಗಳ ಅಂತರದಲ್ಲಿ ಬಸ್‍ಗಳು ಸಂಚಾರ ಕೈಗೊಳ್ಳಲಿವೆ: ರಾಜೇಂದ್ರ ಚೋಳನ್

By

Published : Jun 30, 2019, 4:09 PM IST

ಹುಬ್ಬಳ್ಳಿ: ಜನದಟ್ಟಣೆಯ ಅವಧಿಯಲ್ಲಿ ಇನ್ನು ಪ್ರತಿ 3 ನಿಮಿಷಗಳ ಅಂತರದಲ್ಲಿ ಬಸ್‍ಗಳು ಸಂಚಾರ ಕೈಗೊಳ್ಳಲಿವೆ ಎಂದು ವಾ.ಕ.ರ.ಸಾ. ಸಂಸ್ಥೆ ಹಾಗೂ ಹು-ಧಾ ಬಿ ಆರ್ ಟಿ ಎಸ್ ವ್ಯವಸ್ಥಾಪಕ ನಿದೇಶಕ ರಾಜೇಂದ್ರ ಚೋಳನ್ ತಿಳಿಸಿದ್ದಾರೆ.

ಹುಬ್ಬಳ್ಳಿ-ಧಾರವಾಡ ಅವಳಿ ನಗರದ ನಡುವೆ ಕಾರ್ಯಾಚರಣೆ ನಡೆಸುತ್ತಿದ್ದ 41 ಬೇಂದ್ರೆ ನಗರ ಸಾರಿಗೆ ಖಾಸಗಿ ಬಸ್‍ಗಳ ಪರವಾನಿಗೆ ಅವಧಿ ಮುಕ್ತಾಯವಾಗಿದ್ದು, ಖಾಸಗಿ ಬಸ್‍ಗಳ ಸಂಚಾರ ಹಂತ ಹಂತವಾಗಿ ಸ್ಥಗಿತವಾಗಿಲಿದೆ ಎಂದು ಅವರು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಹುಬ್ಬಳ್ಳಿ- ಧಾರವಾಡ ನಡುವೆ ಸಂಚರಿಸುತ್ತಿದ್ದ ಬಿ.ಆರ್.ಟಿ.ಎಸ್. ಬಸ್‍ಗಳ ಸಂಚಾರ ಅವಧಿಯನ್ನು ಸದ್ಯ ರಾತ್ರಿ 10 ರಿಂದ 11 ಗಂಟೆ ತನಕ ವಿಸ್ತರಿಸಲಾಗಿದೆ. ಪ್ರಸ್ತುತ ಕಾರ್ಯಾಚರಣೆ ಸರತಿಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಎಂದು ರಾಜೇಂದ್ರ ಚೋಳನ್​ ಮಾಹಿತಿ ನೀಡಿದ್ರು.

For All Latest Updates

TAGGED:

ABOUT THE AUTHOR

...view details