ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನಡುವೆ ಸಂಚರಿಸುವ ಬಿಆರ್ಟಿಎಸ್ಬಸ್ ಚಾಲಕನ ಸಮಯ ಪ್ರಜ್ಞೆಯಿಂದ 40ಕ್ಕೂ ಹೆಚ್ಚು ಜನರ ಪ್ರಾಣ ಉಳಿದಿದೆ. ಹೆದ್ದಾರಿಯಲ್ಲಿ ಸಾಗುತ್ತಿದ್ದ ಬಸ್ ನವನಗರದ ಬ್ರಿಡ್ಜ್ ಬಳಿ ಬರುತ್ತಿದ್ದಂತೆ ಬಸ್ ಚಾಲಕನಿಗೆ ತಲೆಸುತ್ತು ಬಂದಿದೆ.
ವಿಡಿಯೋ: ಹೆದ್ದಾರಿಯಲ್ಲೇ ಬಸ್ ಡ್ರೈವರ್ಗೆ ತಲೆಸುತ್ತು... ಸ್ವಲ್ಪದರಲ್ಲೇ 40ಕ್ಕೂ ಹೆಚ್ಚು ಪ್ರಯಾಣಿಕರು ಸೇಫ್ - ‘Dharwad News
ಹುಬ್ಬಳ್ಳಿ-ಧಾರವಾಡ ನಡುವೆ ಬಸ್ ಚಾಲಕರೊಬ್ಬರಿಗೆ ದಿಢೀರ್ ತಲೆ ತಿರುಗಿದೆ. ಆದ್ರೆ ತಕ್ಷಣಕ್ಕೆ ಚಾಲಕ ಬ್ರೇಕ್ ಹಾಕಿ ಬಸ್ನ್ನು ಮುಂದೆ ಬಸ್ ಓಡಿಸಲು ಸಾಧ್ಯವಾಗದೇ ಅಲ್ಲಿಯೇ ಬಸ್ ನಿಲ್ಲಿಸಿದ್ದಾರೆ. ಆಗ ಇದ್ದಕ್ಕಿದ್ದಂತೆ ಸೀಟ್ನಿಂದ ಕೆಳಗೆ ಬಿದ್ದಿದ್ದಾರೆ. ಪ್ರಯಾಣಿಕರಲ್ಲಿ ಕೆಲವರು ತಕ್ಷಣ ಓಡಿಬಂದು ಚಾಲಕನನ್ನು ಮೇಲೆ ಎತ್ತಿ ನೀರು ಕುಡಿಸಿದ್ದಾರೆ.
ಹೆದ್ದಾರಿಯಲ್ಲೇ ಬಸ್ ಡ್ರೈವರ್ಗೆ ತಲೆಸುತ್ತು: ಸ್ವಲ್ಪದರಲ್ಲೆ ಪ್ರಯಾಣಿಕರು ಬಜಾವ್
ಮುಂದೆ ಬಸ್ ಓಡಿಸಲು ಸಾಧ್ಯವಾಗದೇ ಅಲ್ಲಿಯೇ ಬಸ್ ನಿಲ್ಲಿಸಿ ಸೀಟ್ನಿಂದ ಕೆಳಗೆ ಬಿದ್ದಿದ್ದಾರೆ. ಇದೆಲ್ಲಾ ಘಟನೆ ಕಂಡು ಬಸ್ನಲ್ಲಿ ಕುಳಿತಿದ್ದ ಪ್ರಯಾಣಿಕರು ಒಂದು ಕ್ಷಣ ದಂಗಾಗಿದ್ದಾರೆ. ಕೆಲವರು ತಕ್ಷಣ ಓಡಿಬಂದು ಚಾಲಕನನ್ನು ಮೇಲೆ ಎತ್ತಿ ನೀರು ಕುಡಿಸಿದ್ದಾರೆ.
ಆದರೆ ವೇಗದಲ್ಲಿ ಬರುತ್ತಿದ್ದ ಬಸ್ ತಕ್ಷಣವೇ ನಿಲ್ಲಿಸಿ ಪ್ರಯಾಣಿಕರ ಪ್ರಾಣ ಕಾಪಾಡಿದ ಡ್ರೈವರ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಈ ದೃಶ್ಯ ಬಸ್ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.