ಹುಬ್ಬಳ್ಳಿ:ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದ 10,000 ರೂ. ಮರಳಿಸಿ ಚಾಲಕ ಮತ್ತು ನಿರ್ವಾಹಕರು ಪ್ರಾಮಾಣಿಕತೆ ಮೆರೆದಿದ್ದಾರೆ.
ಪ್ರಯಾಣಿಕರಿಗೆ 10,000 ರೂ. ಮರಳಿಸಿ ಪ್ರಾಮಾಣಿಕತೆ ಮೆರೆದ ಬಸ್ ಚಾಲಕ, ನಿರ್ವಾಹಕ - latest hubli news
ಹುಬ್ಬಳ್ಳಿ ವಿಭಾಗದ ಗ್ರಾಮಾಂತರ ಒಂದನೇ ಘಟಕದ ಬಸ್ ಚಾಲಕ ಆರ್.ಎನ್. ಮಾಳವಾಡ ಮತ್ತು ನಿರ್ವಾಹಕ ಆರ್.ಡಿ. ದೇಗಾಂವಕ ಅವರು ಪ್ರಯಾಣಿಕ ಸಂತೋಷ್ ಎಂಬುವವರಿಗೆ 10,000 ರೂ.ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಬಸ್ ಚಾಲಕ-ನಿರ್ವಾಹಕ
ಹುಬ್ಬಳ್ಳಿ ವಿಭಾಗದ ಗ್ರಾಮಾಂತರ ಒಂದನೇ ಘಟಕದ ಬಸ್ ಚಾಲಕ ಆರ್.ಎನ್. ಮಾಳವಾಡ ಮತ್ತು ನಿರ್ವಾಹಕ ಆರ್.ಡಿ. ದೇಗಾಂವಕ ಅವರು ಪ್ರಯಾಣಿಕ ಸಂತೋಷ್ ಎಂಬುವವರಿಗೆ ಹಣ ಮರಳಿಸಿದ್ದಾರೆ.
ಲಾಕ್ಡೌನ್ ಮಾರ್ಗದರ್ಶಿ ಸೂಚಿಗಳ ಪ್ರಕಾರ ಪ್ರಯಾಣಿಕರ ಹೆಸರು, ದೂರವಾಣಿ ಸಂಖ್ಯೆ ಪಡೆಯಲಾಗುತ್ತಿದೆ. ಪ್ರಯಾಣಿಕನ್ನು ಬಿಟ್ಟು ಹೋದ ಹಣವಿದ್ದ ಪರ್ಸ್ ಚಾಲಕ ಮತ್ತು ನಿರ್ವಾಹಕ ಅವರ ಗಮನಕ್ಕೆ ಬಂದಿದೆ. ನಂತರ ಸಂತೋಷ್ ಎಂಬುವವರನ್ನು ಕರೆ ಮಾಡಿ ಘಟಕದ ಮೇಲಾಧಿಕಾರಿಗಳ ಸಮ್ಮುಖದಲ್ಲಿ ವಿಚಾರಿಸಿದ್ದಾರೆ. ಬಳಿಕ 10,000 ರೂ.ಯನ್ನು ವಾರಸುದಾರರಿಗೆ ಹಿಂದಿರುಗಿಸಿದ್ದಾರೆ.