ಹುಬ್ಬಳ್ಳಿ:ಗ್ರಾಮೀಣ ಭಾರತದ ಡಿಜಿಟಲೀಕರಣಕ್ಕೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಗ್ರಾಮೀಣ ಭಾಗದವರಿಗೆ ಬಿಎಸ್ಎನ್ಎಲ್ ಫ್ರಾಂಚೈಸಿಗಳನ್ನು ನೀಡಲಾಗುತ್ತದೆ ಬಿಎಸ್ಎನ್ಎಲ್ ಭಾರತ ನೆಟ್ ಉದ್ಯಮಿ ಯೋಜನೆಯ ಅಡಿಯಲ್ಲಿ ಬಿಎಸ್ಎನ್ಎಲ್ ಧಾರವಾಡ ಟೆಲಿಕಾಂ ಜಿಲ್ಲೆ ಜನರಿಗೆ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಸಮಾಜದ ಎಲ್ಲ ವರ್ಗಗಳ ಅಗತ್ಯತೆಗಳನ್ನು ಪೂರೈಸಲು, ಟೆಲಿಕಾಂ ಸೇವೆಗಳನ್ನು ಒದಗಿಸಲು ಬದ್ದವಾಗಿದೆ ಎಂದು ಬಿಎಸ್ಎನ್ಎಲ್ ಜನರಲ್ ಮ್ಯಾನೇಜರ್ ಡಿ.ಕೆ.ತ್ರಿಪಾಟಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಗ್ರಾಹಕರಿಗೆ ಆರಂಭಿಕ ವೆಚ್ಚದಲ್ಲಿ ಸಬ್ಸಿಡಿ ಮಾಡುವ ಮೂಲಕ ಗ್ರಾಮ ಪಂಚಾಯತ್ ಪ್ರದೇಶಗಳಲ್ಲಿ ಹೆಚ್ಚಿನ ವೇಗದ ಬ್ರಾಡ್ ಬ್ಯಾಂಡ್ ಸಂಪರ್ಕಗಳನ್ನು ಒದಗಿಸುವ ಉದ್ದೇಶ ಹೊಂದಲಾಗಿದೆ. ಇದೀಗ ಬಿಎಸ್ಎನ್ಎಲ್ ಭಾರತ್ ನೆಟ್ ಉದ್ಯಮಿ ಯೋಜನೆಯ ಅಡಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಮೋಡ್ನಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ. ಹೀಗಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಫ್ರ್ಯಾಂಚೈಸಿಗಳನ್ನು ನೀಡಲಾಗುತ್ತಿದ್ದು, ಆಸಕ್ತರು ನೊಂದಾಯಿಸಿಕೊಳ್ಳಬೇಕು ಎಂದರು.