ಧಾರವಾಡ:ಧಾರಾಕಾರ ಮಳೆ ಸುರಿಯುತ್ತಿರುವ ಕಾರಣ ರಸ್ತೆಯಲ್ಲಿ ಬಿದ್ದ ಗುಂಡಿಗಳಿಂದಾಗಿ ರಸ್ತೆ ಮಧ್ಯದಲ್ಲಿಯೇ ಬಿಆರ್ಟಿಎಸ್ ಬಸ್ ಸಿಲುಕಿ ಸಾರ್ವಜನಿಕರು ಪರದಾಡುವಂತಾಯಿತು.
ಧಾರಾಕಾರ ಮಳೆಯಿಂದಾಗಿ ಗುಂಡಿಯಲ್ಲಿ ಸಿಲುಕಿದ ಬಿಆರ್ಟಿಎಸ್ - ಧಾರವಾಡ
ಧಾರವಾಡದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಸ್ತೆಯಲ್ಲಿನ ಗುಂಡಿಯಲ್ಲಿ ಬಿಆರ್ಟಿಎಸ್ ಬಸ್ ಸಿಲುಕಿ ಇತರ ವಾಹನಗಳ ಸಂಚಾರಕ್ಕೆ ತೊಂದರೆಯನ್ನುಂಟು ಮಾಡಿತು.
ಗುಂಡಿಯೊಳಗೆ ಸಿಲುಕಿರುವ ಬಸ್
ಬಸ್ ಸಿಲುಕಿದ ಪರಿಣಾಮ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಧಾರವಾಡದ ಹೊಸ ಬಸ್ ನಿಲ್ದಾಣದ ಹಿಂದೆ ಈ ಘಟನೆ ಸಂಭವಿಸಿದೆ. ಬಸ್ ಸಿಲುಕಿಕೊಳ್ಳುವುದಕ್ಕೆ ಕಳಪೆ ಒಳಚರಂಡಿ ಕಾಮಗಾರಿಯೇ ಕಾರಣ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.
ಬಸ್ ಸಿಲುಕಿಕೊಂಡ ಪರಿಣಾಮ ಡಿಪೋದಲ್ಲಿನ 30ಕ್ಕೂ ಹೆಚ್ಚು ಬಸ್‌ಗಳು ರಸ್ತೆಗೆ ಇಳಿದಿಲ್ಲ ಎನ್ನಲಾಗಿದೆ. ಡ್ಯೂಟಿಗೆ ತೆರಳಬೇಕಾದ ಮೂವತ್ತಕ್ಕೂ ಹೆಚ್ಚು ಬಸ್ ಮತ್ತು ಚಾಲಕ, ನಿರ್ವಾಹಕರು ಪರದಾಟ ನಡೆಸಿದ್ದು, ಗುಂಡಿಗೆ ಬಿದ್ದ ಬಸ್ನ್ನು ರಸ್ತೆಗಿಳಿಸಲು ಚಾಲಕರು ಹರಸಾಹಸ ಪಟ್ಟಿದ್ದಾರೆ.